ಕುಂದಾಪುರದಲ್ಲಿ ಜೀವನ ಜ್ಯೋತಿ ಶಿಬಿರ- ಜೀವನ ಎಂಬ ಸಮುದ್ರದಲ್ಲಿ ನೀವು ಇಜಲು ಕಲಿಯಬೇಕು:ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಅ.3: ಕುಂದಾಪುರ ವಲಯ ಮಟ್ಟದಲ್ಲಿ ರೋಜರಿ ಚರ್ಚಿನ ಮುಂದಾಳತ್ವದಲ್ಲಿ ಕ್ರೈಸ್ತ ಮಕ್ಕಳಿಗೆ 3 ರೀತಿಯ ಶಿಬಿರಗಳು ನಡೆದವು, 10 ನೆ ತರಗತಿಯವರಿಗೆ ಜೀವನ ಜ್ಯೋತಿ, 9 ನೇ ತರಗತಿಯವರಿಗೆ ಜೀವನ ಅಮ್ರತ ಮತ್ತು 8 ನೇ ತರಗತಿಯವರಿಗೆ ಜೀವನ ದಿಶಾ ಎಂಬ ಶಿಬಿರಗಳ ಉದ್ಘಾಟನ ಕಾರ್ಯಕ್ರಮವು ಸಂತ ಜೋಸೆಫ್ ಶಾಲೆಯ ಸಭಾಭವನದಲ್ಲಿ ನಡೆಯಿತು.

     ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಲಯ ಪ್ರಧಾನ ಮತ್ತು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ “ ನೀವು ಜೀವನದಲ್ಲಿ ಕನಸು ಕಾಣಬೇಕು, ನೀವು ಎನಾಗಬೇಕೆಂದು ಬಯಸುತ್ತಿರೊ ಅದನ್ನು ಸಾಧಿಸಿ ತೋರಿಸಲು ಈ ಶಿಬಿರಗಳು ನಿಮಗೆ ಉಪಯೋಗವಾಗುತ್ತವೆ. ನೀವು ಜೀವನ ಎಂಬ ಸಮುದ್ರದಲ್ಲಿ ಇಜಲು ಕಲಿತು ನೀವು ತಲುಪಬೇಕಾದ ಬಂದರಿಗೆ ಸುರಕ್ಷಿತವಾಗಿ ತಲುಪಬೇಕು. ನೀವು ಉತ್ತಮ ಮನುಷ್ಯರಾಗಬೇಕು, ಉತ್ತಮ ಕೆಲಸಗಳನ್ನು ಮಾಡಿದಲ್ಲಿ ನಿಮಗೆ ಬಹುಮಾನ ದೊರಕುವುದು, ಕೆಟ್ಟ ಕೆಲಸಗಳನ್ನು ಮಾಡಿದಲ್ಲಿ ನಿಮಗೆ ಶಿಕ್ಷೆ ಪ್ರಾಪ್ತಿಯಾಗುವುದು, ಈ ಶಿಬಿರಗಳಲ್ಲಿ ಕಲಿಯಲು ತುಂಬಾ ವಿಷಗಳಿರುತ್ತವೆ, ಆದರಿಂದ ಈ ಶಿಬಿರದ ಉಪಯೋಗವನ್ನು ನೀವು ಚೆನ್ನಾಗಿ ಬಳಸಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.

   ಈ ಶಿಬಿರದ ಜವಾಬ್ದಾರಿ ವಹಿಸಿಕೊಂಡ ತಲ್ಲೂರು ಚರ್ಚಿನ ಫಾ| ಎಡ್ವಿನ್ ಡಿಸೋಜಾ, ಶಿಬಿರದ ಎರ್ಪಾಡನ್ನು ಮಾಡಿದ  ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ನೊರೊನ್ಹಾ ಮತ್ತು ಈ ಶಿಬಿರಕ್ಕೆ ಸೇವೆ ನೀಡಲಿಕ್ಕಾಗಿ ಆಗಮಿಸಿದ ಧರ್ಮಗುರುಗಳಾದ ಪಿಯುಸ್ ನಗರ್ ಚರ್ಚಿನ ಆಲ್ಬರ್ಟ್ ಕ್ರಾಸ್ತಾ, ಪಡುಕೋಣೆ ಚರ್ಚಿನ ಫ್ರಾನ್ಸಿಸ್ ಕರ್ನೆಲೀಯೊ, ಗಂಗೊಳ್ಳಿ ಚರ್ಚಿನ ತೊಮಸ್ ರೋಶನ್ ಡಿಸೋಜಾ ಮತ್ತು ಇನ್ನಿತರ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು, ಹಲವಾರು ಸಚೇತಕಿಯರು ಉಪಸ್ಥಿತರಿದ್ದರು.

 ಈ ಶಿಬಿರದಲ್ಲಿ ಸುಮಾರು 280 ಶಿಬಿರಾರ್ಥಿಗಳಿದ್ದವರಿಗೆ ಉಪಹಾರ ಮತ್ತು ಊಟದ ಸಿದ್ದ ಪಡಿಸಲು ರೋಜರಿ ಚರ್ಚಿನ ಸ್ತ್ರೀ ಸಂಘಟನೇಯ ಸದಸ್ಯರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಂದಾಪುರ ಚರ್ಚಿನ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದು, ಶಿಬಿರದ ವಿದ್ಯಾರ್ಥಿಗಳೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.