ಕುಂದಾಪುರದಲ್ಲಿ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ ದಿನಾಚರಣೆಯನ್ನು ಆಚರಿಸಿತು


ಕುಂದಾಪುರ, ಅ.3: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಅಕ್ಟೋಬರ್ 2 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪ್ರಾರ್ಥನೆಯನ್ನು ನಡೆಸಿಕೊಟ್ಟು ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆ ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತಿದೆ, ನಿಮ್ಮ ಈ ಸೇವೆ ಅಮೂಲ್ಯವಾದುದು, ನಿಮ್ಮ ಸಭೆಯ ಕೆಲಸ ಮೆಚ್ಚುಗೆ ಪಾತ್ರವಾದುದು’ ಎಂದು ಶುಭ ಕೋರಿದರು.
ಸಂತ ವಿನ್ಸೆಂಟ್ ಪಾವ್ಲ್ ಇದರ ವಲಯ ಅಧ್ಯಕ್ಷ ಅಂತೋನಿ ಡಿಸೋಜಾ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಖಚಾಂಚಿ ಇಗ್ನೆಶಿಯಸ್ ಖರ್ಚು ವೆಚ್ಚಗಳನ್ನು ಮುಂದಿಟ್ಟರು. ವೇದಿಕೆಯಲ್ಲಿ ಕುಂದಾಪುರದವರೆ ಆದ ಪ್ರಸ್ತುತ ಇಟೆಲಿಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫಾ| ಮನೋಜ್ ಬ್ರಗಾಂಜಾ, ಸಂತ ಜೋಸೆಫ್ ಡಿಕುನ್ಹಾ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಮೊದಲು ಬಲಿ ಪೂಜೆಯನ್ನು ಅರ್ಪಿಸಲಾಯಿತು. ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಸ್ವಾಗತಿಸಿದರು. ವಿಕ್ಟರ್ ಡಿಸೋಜಾ ವಂದಿಸಿದರು. ಡೊಮಿನಿಕ್ ಬ್ರಗಾಂಜಾ ನಿರೂಪಿಸಿದರು.