ಶೀನಿವಾಸಪುರ ತಾಲ್ಲೂಕು ಎಲ್‍ಐಸಿ ಏಜೆಂಟರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶೀನಿವಾಸಪುರ: ತಾಲ್ಲೂಕು ಎಲ್‍ಐಸಿ ಏಜೆಂಟರು ಶುಕ್ರವಾರ ತಮ್ಮ ಬೇಡಿಕೆ
ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
  ಎಲ್‍ಐಸಿ ಪ್ರತಿನಿಧಿ ಡಿ.ಆರ್.ಮಧ್ವೇಶ್ ಮಾತನಾಡಿ, ಭಾರತೀಯ ಜೀವವಿಮಾ ನಿಗಮ ಆನ್
ಲೈನ್ ಮೂಲಕ ಪಾಲಿಸಿ ಮರಾಟ ಮಾಡುವುದು ಮತ್ತು ರಿಯಾಯಿತಿ ನೀಡುವದನ್ನು
ನಿಲ್ಲಿಸಬೇಕು. ನೇರ ಮಾರುಕಟ್ಟೆಯಿಂದ, ನೇರವಾಗಿ ಪಾಲಿಸಿದಾರರನ್ನು
ಸಂಪರ್ಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
  ಗ್ರಾಚ್ಯುಟಿ ರೂ.10 ಲಕ್ಷದವರೆಗೆ ಹೆಚ್ಚಿಸಬೇಕು. ಎಲ್ಲ ಪ್ರತಿನಿಧಿಗಳು
ಹಾಗೂ ಸಂಘದ ಸದಸ್ಯರಿಗೆ ಗ್ರೂಪ್ ಇನ್ಸೂರೆನ್ಸ್ ಹೆಚ್ಚಿಸಬೇಕು.
ಪ್ರತಿನಿಧಿಗಳಿಗೆ ಶ್ರೇಣಿ ಪ್ರಕಾರ ಶಿಕ್ಷೆ ಪ್ರಮಾಣ ಪರಿಚಯಿಸಬೇಕು. ಬೋನಸ್
ಹೆಚ್ಚಿಸಬೇಕು. ವ್ಯವಹಾರ ವಿನಾಯಿತಿ ಮುಂದುವರಿಸಬೇಕು. ಕಮೀಷನ್
ಹೆಚ್ಚಿಸಬೇಕು. ವಿದೇಶಿ ಬಂಡವಾಳ ಮಿತಿ ಶೇ.74 ಹೆಚ್ಚಳ ಕೈಬಿಡಬೇಕು ಎಂದು
ಒತ್ತಾಯಿಸಿದರು.
  ಕೇಂದ್ರ ಸರ್ಕಾರ ಷೇರು ಮಾರುಕಟ್ಟೆಯಲ್ಲಿ ಎಲ್‍ಐಸಿ ಪಿಒ ಬಿಡುಗಡೆ
ಮಾಡುತ್ತಿರುವುದನ್ನು ಎಎಲ್‍ಐಸಿ ಪ್ರತಿನಿಧಿಗಳ ಸಂಘ ವಿರೋಧಿಸುತ್ತದೆ
ಎಂದು ಹೇಳಿದರು.
  ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು
ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ಸಿ.ಪ್ರಸಾದ್ ಅವರಿಗೆ ನೀಡಲಾಯಿತು.
  ಎಲ್‍ಐಸಿ ಪ್ರತಿನಿಧಿಗಳಾದ ಪ್ರಕಾಶ್ ರೆಡ್ಡಿ, ಪೆದ್ದನ್ನ, ಮಂಜುನಾಥ್,
ಎಸ್.ನಾರಾಯಣಸ್ವಾಮಿ, ಕೆ.ನಾರಾಯಣಸ್ವಾಮಿ, ಚೌಡಪ್ಪ, ಎಸ್.ಲಕ್ಷ್ಮಣಬಾಬು, ಸಬ್ಬೀರ್,
ಶ್ರೀನಾಥ್, ಎನ್.ವಿ.ವೆಂಕಟರಾಮರೆಡ್ಡಿ, ಕೃಷ್ಣಪ್ಪ, ಸುಮಂತು ಶ್ರೀನಿವಾಸರೆಡ್ಡಿ,
ಇದ್ದರು.