ಅರಸು ನರ್ಸಿಂಗ್ ಕಾಲೇಜಿನಲ್ಲಿ ಹೃದಯ ದಿನಾಚರಣೆ

ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಶಾಸ ಚಿಕಿತ್ಸೆ ಶುಶ್ರೂóóಷ ವಿಭಾಗದವರಿಂದ ಸೆ.29 ಗುರುವಾರ ವಿಶ್ವ ಹೃದಯ ದಿನಚರಣೆಯನ್ನು ಶ್ರೀ ದೇವರಾಜ್ ಅರಸ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯಕೀಯ ವಿಭಾಗ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ, ಡಾ. ರವೀಶ್ ಭಾಗವಹಿಸಿ ಮಾತನಾಡಿ, ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ ಎಂಬ ವಿಷಯ ಕುರಿತು ಮಾತನಾಡುತ್ತಾ ಶೇ.80 ಹೃದಯ ರೋಗಗಳನ್ನು ನಮ್ಮ ಜೀವನ ಶೈಲಿ ಬದಲಾಯಿಸುವುದರ ಮೂಲಕ ತಡೆಗಟ್ಟಬಹುದು ಎಂದರು.
ಜೀವನ ಶೈಲಿಯನ್ನು ಈ ದಿನಗಳಲ್ಲಿ ನಾವು ಬದಲಾವಣೆಯನ್ನು ಮಾಡಬೇಕಾಗಿದೆ ಅನಾರೋಗ್ಯಕರ ಆಹಾರ ಸೇವನೆ, ಕಂಪ್ಯೂಟರ್, ಮೋಬೈಲ್ ಬಳಕೆಯಿಂದ ದೈಹಿಕ ನಿಷ್ಕ್ರಯತೆ, ಹಾನಿಕಾರಕ ಮದ್ಯದ ಬಳಕೆಗಳಲ್ಲಿ ಹೆಚ್ಚು ಆಸಕ್ತಿತಿ ಹೊಂದಿದ್ದೇವೆ ಇದನ್ನು ಬಿಟ್ಟು ರಾಗಿ ಮುದ್ದೆ, ಹಣ್ಣುಗಳು, ಹಸಿರು ತರಕಾರಿ ಬಳಸಿ ಹಾಗೂ ದಿನ ನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮ ಹೃದಯವನ್ನು ರಕ್ಷಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್‍ಎಲ್‍ಜೆ ನರ್ಸಿಂಗ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಡಾ.ಜೀನತ್ ವರದಿ ಮಂಡಿಸಿದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ವಿಜಯಲಕ್ಮಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗೀತಾ ನಿರೂಪಿಸಿ, ರಷ್ಮಿ ವಂದಿಸಿದರು.