ಸ್ವಾತಂತ್ರ್ಯ ಹೋರಾಟದ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ-ಡಾ . ಪಿ.ಎಸ್.ಅಂಜನ್‌ ಕುಮಾರ್‌

ಶ್ರೀನಿವಾಸಪುರ : ಸ್ವಾತಂತ್ರ್ಯ ಹೋರಾಟದ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ . ಸ್ವಾತಂತ್ರ್ಯ ರಕ್ಷಣೆಗೆ ಪ್ರೇರಣೆ ನೀಡಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ . ಪಿ.ಎಸ್.ಅಂಜನ್‌ ಕುಮಾರ್‌ ಹೇಳಿದರು . ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು , ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅ .೨ ರಂದು ಬೆಳಿಗ್ಗೆ ೮ ಗಂಟೆಗೆ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ವಿದುರಾಶ್ವತ್ಥಕ್ಕೆ ಸದ್ಭಾವನಾ wwww ಯಾತ್ರೆ ಏರ್ಪಡಿಸಲಾಗಿದೆ ಎಂದು ಹೇಳಿದರು . ಜಾತಿ , ಧರ್ಮ ಹಾಗೂ ಪಕ್ಷ ಭೇದವಿಲ್ಲದೆ ಭಾವೈಕ್ಯದೆಡೆಗೆ ಸದ್ಭಾವನಾ ನಡಿಗೆ ಏರ್ಪಡಿಸಲಾಗಿದೆ . ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ . ಜಾತಿ ಏತ ಭೇದವಿಲ್ಲದೆ ಹೋರಾಡಿದ್ದಾರೆ . ಆದ್ದರಂದಲೇ ಇಂದಿನ ಐತಿಹಾಸಿಕ ಪಾದಯಾತ್ರೆಯೂ ಜಾತ್ಯಾತೀತವಾಗಿರುತ್ತದೆ ಎಂದು ಹೇಳಿದರು . ಪಾದಯಾತ್ರೆ ಮಾರ್ಗದಲ್ಲಿ ಪಾದಯಾತಿಗಳಿಗೆ ತಿಂಡಿ ತೀರ್ಥದ ವ್ಯವಸ್ಥೆ ಇರುತ್ತದೆ . ವಿದುರಾಶ್ವತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ . ಜನರು ಈ ಕಾರ್ಯಕ್ರಮದಲ್ಲಿ ಜಾತ್ಯಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು . ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್ , ಪದಾಧಿಕಾರಿಗಳಾದ ಎನ್.ಗೋಪಿನಾಥರಾವ್ , ಎಸ್.ಸುಬ್ರಮಣಿ , ಸಿ.ಎಸ್.ರಮೇಶ್ , ಕೆ.ಎನ್.ಅರುಣ್ ಕುಮಾರ್ ಇದ್ದರು