ರಾಯಲ್ಪಾಡು 1 : ಮನಸ್ಸು ಬುದ್ದಿ ಸಾತ್ವಿಕತೆಗಳು ನಿಷ್ಕಳಂಕವಾಗಿ ಸ್ಥಿತಿ ಪ್ರಜ್ಞೆಯಿಂದ ವಿಚಾರಾತ್ಮಕ ರೀತಿಯಲ್ಲಿ ಬಳಿಸಿದಾಗ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಂದ ನಮ್ಮ ದೇಶದ ಕಲೆ ಸಂಸ್ಕøತಿಯನ್ನು ಉಳಿಸಲು ಸಾದ್ಯ , ವಿದ್ಯಾರ್ಥಿಗಳು ತಮ್ಮ ಹಳ್ಳಿಯಲ್ಲಿನ ಹಿರಿಯರು ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಸಮಯದಲ್ಲಿ ಹಾಡುವ ಜಾನಪದ ಹಾಡುಗಳನ್ನು , ಭಜನೆಯ ಹಾಡುಗಳನ್ನು , ನಾಟಕಗಳನ್ನು , ವಿವಿಧ ವೇಷಭೂಷಣಗಳ ವಿಚಾರವಾಗಿ ತಮ್ಮ ಹಿರಿಯ ಬಳಿ ಮಕ್ಕಳು ಕೇಳಿ ಅರಿಯುತ್ತಾರೆ . ಅವುಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶ ಕಲೆ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದರು.
ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ, ತಾ.ಪಂ.ಮಾಜಿ ಅಧ್ಯಕ್ಷ ನರೇಶ್ , ಗ್ರಾ.ಪಂ.ಅಧ್ಯಕ್ಷೆ ಅರುಣ ವೆಂಕಟ್, ಪಿಡಿಒ ನರೇಂದ್ರಬಾಬು, ಕೂರಿಗೇಪಲ್ಲಿ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥರೆಡ್ಡಿ, ಗ್ರಾ.ಪಂ.ಸದಸ್ಯರಾದ ಆರ್.ಗಂಗಾದರ್, ಅಶೋಕ್ರೆಡ್ಡಿ, ನಾಗೇಶ್, ಸಿಆರ್ಪಿ ವರದರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಶಶಿಕುಮಾರ್, ಮುಖ್ಯ ಶಿಕ್ಷಕ ಪಿ.ಮಾರಣ್ಣ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಧನಲಕ್ಷ್ಮಿ, ಎಸ್ಡಿಎಂಸಿ ಅಧ್ಯಕ್ಷೆ ಗಾಯತ್ರಿ, ಜಿಂಕಲವಾರಿಪಲ್ಲಿ ಶಾಲೆ ಮುಖ್ಯ ಶಿಕ್ಷಕ ಎಂ.ಕೆ.ವೆಂಕಟರಮಣ ಇದ್ದರು.