ಕುಂದಾಪುರ: ಕುಂದಾಪುರದ ಮಾಜಿ ಪುರಸಭಾ ಅಧ್ಯಕ್ಷ, ಕ್ರೀಡಾಳು ದಿ. ಎಡ್ವಿನ್ ಕ್ರಾಸ್ಟೊ ಅವರ ಪುತ್ರಿ ಹಾಗೂ ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಹಾಗೂ ಕುಂದಾಪುರ ಮೂಲದ ಲೆಸ್ಲಿ ಕರ್ವಾಲೊ ಅವರ ಪತ್ನಿ. ವಿಲ್ಮಾ ಮೂಲದ 54 ವರ್ಷದ ವಿಲ್ಮಾ ಕ್ರಾಸ್ಟೊ ಕರ್ವಾಲ್ಲೊ ಅವರು ವಿಶ್ವದ ಎರಡನೇ ಅತಿ ಎತ್ತರದ ಮೋಟಾರು ವಾಹನ ರಸ್ತೆಯಾದ ಖರ್ದುಂಗ್ ಲಾ ಪಾಸ್‌ನಲ್ಲಿ ಮೋಟಾರು ಬೈಕ್‌ನಲ್ಲಿ ಪ್ರಯಾಣಿಸುವ ಕನಸನ್ನು ನನಸಾಗಿಸುವುದರ ಮೂಲಕ ವಿಶೇಷ ಸಾಧನೆ ಮಾಡಿದ ದಾಖಲೆ ಬರೆದಿದ್ದಾಳೆ. 54 ವರ್ಷದ ಭಾರತೀಯ ಹಿರಿಯ ಮಹಿಳೆಯಾಗಿ ವಿಲ್ಮಾ ಮೋಟಾರ್ ಬೈಕಿನಲ್ಲಿ ಖುರ್ದುಂಗ್ ಲಾ, ನುಬ್ರಾ, ಹಂಟರ್, ಪಾಂಗಾಂಗ್ ಲೇಕ್, ತ್ಸೋ ಮೊರಿರಿ ಮೂಲಕ ಲೇಹ್ ತಲುಪಿದಳು. ಈ ಮಾರ್ಗ ತುಂಬ ಕಠಿಣವಾಗಿದ್ದು, ಉಷ್ಣ್ಸ್ತೆ 40 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ, ಈ ಪಯಣದ ಸಮಯ ಅವಳ ಮಗಳು ಚೇರಿಶ್ ಕರ್ವಾಲ್ಲೊ ಅವಳ ಜೊತೆಗಿದ್ದು, ಅವಳು ತಾಯಿಗೆ ಜೊತೆ ನೀಡಿದಳು. ಒಟ್ಟಾರೆಯಾಗಿ 500 ಕಿ.ಮಿ ವಿಲ್ಮಾ ಅವರೇ ಬೈಕ್ ಚಲಾಯ್ಸಿದರು. ಈ ಮಾರ್ಗ ಲಡಾಖಿನ 17,982 ಅಡಿ ಎತ್ತರ ಇದ್ದು ಖರ್ದ್ಲುಂಗಾ ಪಾಸ್ನ ತುತ್ತ ತುದಿಗ್ಎ ತೆರಳಿ ವಿಲ್ಮಾ ಈ ಸಾಧನೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಕಡಿಮೆ ಆಮ್ಲಜನಕದ ಮಟ್ಟವಾಗಿತ್ತು, ರಸ್ತೆ ಪರಿಸ್ಥಿತಿಗಳು ಮತ್ತು ಪ್ರದೇಶಗಳು ಸವಾಲಾಗಿತ್ತು.
ಈ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಾನು ಕಳೆದ ಆರು ತಿಂಗಳಿನಿಂದ ತರಬೇತಿ ಪಡೆದಿದ್ದೆ. ನನ್ನ ಮಗ ಮತ್ತು ಮಗಳು ನನ್ನ ದೊಡ್ಡ ಪ್ರೇರಕರು, ಎಂದು ವಿಲ್ಮಾ ಹೇಳುತ್ತಾರೆ. ಈ ಪ್ರವಾಸವು ನನ್ನ ಕನಸುಗಳಲ್ಲಿ ಒಂದಾಗಿತ್ತು ಮತ್ತು ಅವರು ಅದನ್ನು ನನಸಾಗಿಸಿದೆ ಎಂದು ಹೇಳಿದರು.
ವಿಲ್ಮಾ ಮೊದಲಿನಿಂದಲೂ ಕ್ರೀಡೆಯಲ್ಲಿ ಹೆಸರು ಗಳಿಸಿದವರು. ಭಂಡಾರ್ಕಾರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದು ಕರ್ನಾಟಕದಿಂದ ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ತಂಡವನ್ನು ಪ್ರತಿನಿಧಿಸುವ ಮೊದಲ ಹುಡುಗಿಯಾಗಿದ್ದಳು. ಕ್ರಾಸ್ಟೊ ಕುಟುಂಬ ಅವರ ತಂದೆಯಂತೆ ಕ್ರೀಡೆಯಲ್ಲಿ ತೊಡಗಿಕೊಂಡವರಿಗೆ ಸ್ಪೂರ್ತಿದಾಯಕರು. ವಿಲ್ಮಾಳ ಅಣ್ಣ ವಿನ್ಸೆಂಟ್ ಕ್ರಾಸ್ಟೊ ಕ್ರೀಡಾ ಪಟುಗಳಿಗೆ ಆಥ್ಲೆಟ್ ಗಳಿಗೆ ಪ್ರೇರಣಾ ಭರಿತರು. ಅದಕ್ಕೆ ನಾನೇ ಸಾಕ್ಷಿ, ನಾನು ತಾಲೂಕು ಮಟ್ಟದ ಒಟದಲ್ಲಿ ಒಡುವಾಗ ನನಗೆ ಪ್ರೇರಣೆ ನೀಡಲು ಟ್ರ್ಯಾಕ್ ಹೊರಗಡೆಯಿಂದ ಒಡುತ್ತಾ ನನ್ನನ್ನು ಹಿಂಬಾಲಿಸಿ ಪ್ರೇರಣೆ ನೀಡಿದ್ದು, ಈಗಲೂ ಆ ದ್ರಶ್ಯ ನನ್ನ ಕಣ್ಣ ಮುಂದೆ ನಿಲ್ಲುತ್ತದೆ. ಈಗ ವಿಲ್ಮಾ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಪೊರೇಟ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಜನನುಡಿ.ಡಾಟ್ ಕಾಮ್ ಸಂಸ್ಥೆ ವಿಲ್ಲಾ ಮತ್ತು ಅವಳ ಕುಟುಂಬಕ್ಕೆ ಶುಭಾಶಯವನ್ನು ಕೋರುತ್ತದೆ.