ಶಾಸಕ ರಮೇಶ್ ಕುಮಾರ್ ವಿರುದ್ಧ – ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ವಾಗ್ದಾಳಿ

ಶ್ರೀನಿವಾಸಪುರ : ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಳದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಗೆ ರೈತರ ಬೆಳೆಗಳು ನಷ್ಟವಾಗಿದ್ದರೂ ಅಧಿಕಾರಿಗಳನ್ನಾಗಲಿ ಜಿಲ್ಲಾಡಳಿತವನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಹಾರ ಕೊಡಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ ಎಂದು ಶಾಸಕ ಕೆ.ಆರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು .
ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಸ್ಥಳೀಯ ರೈತರು ಹಾಗೂ ಮುಖಂಡರು ಕೋಲಾರ ಮತ್ತು ಶ್ರೀನಿವಾಸಪುರ ಮಾರ್ಗದ ಮುದುವಾಡಿ ಕೆರೆಗೆ ಹೆಚ್ಚು ಮಳೆಯಾದಗ ಕೊಡಿಯ ನೀರಿನಿಂದಾಗಿ ವಾಹನಗಳು ಓಡಾಡಲು ಕಷ್ಟವಾಗಿತ್ತಾ ಇದ್ದು ಪರ್ಯಾಯಯವಾಗಿ ಬೆಳ್ಳಂಬರಿ ಮಾರ್ಗವಾಗಿ ಹೋಗುವಾಗ ರಾಜಕಾಲುವೆ ದುರಸ್ತಿ ಇಲ್ಲದೇ ನೀರು ರಸ್ತೆಯಲ್ಲಿ ಬರುತ್ತಾ ಇದೆ .
ಕೆಸಿ ವ್ಯಾಲಿ ನೀರಿನಿಂದಾಗಿ ಹೋಳೂರು ಕೆರೆಯ ಅಚ್ಚುಕಟ್ಟು ಪ್ರದೇಶವಾದ ಕಾನಿಯಲ್ಲಿ ನೀರು ತುಂಬಿಕೊಂಡಿದ್ದು ಇದರಿಂದಾಗದಿ ಅಪಾರವಾದ ಬೆಳೆ ನಷ್ಟವಾಗಿದೆ ಎಂದು ಮಾಜಿ ಶಾಸಕರ ಗಮನಕ್ಕೆ ರೈತರು ತಂದರು ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನವಾಗಿದ್ದು ಈ ಬಗ್ಗೆ ಗಮನ ಹರಿಸಿ ಸರಕಾರದಿಂದ ಪರಿಹಾರ ಕೊಡಿಸಬೇಕಾದ ಶಾಸಕರು ರೈತರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎ೦ದರು.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ರೈತರ ಜಮೀನಿಗಳಿಗೆ ಕರೆದುಕೊಂಡು ಹೋಗಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕಾಗಿತ್ತು ಆದರೆ ಶಾಸಕರು ರೈತರ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾ ಇರುವುದು ಎದ್ದು ಕಾಣುತ್ತಾ ಇದೆ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳಿಗೆ ಹಾನಿಯಾಗಿದೆ ರಾಜ್ಯ ಸರ್ಕಾರ ಕೊಡುವ ಪರಿಹಾರದ ಮೊತ್ತದಿಂದ ರೈತರ ಕಣ್ಣೀರು ಹೊರೆಸುವ ಕೆಲಸ ಆಗುವುದಿಲ್ಲ .
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಚರ್ಚಿಸಿ ನ೦ತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಬಳಿಗೆ ನಿಯೋಗ ತರೆಳಿ ಹೆಚ್ಚಿನ ಪರಿಹಾರ ಮೊತ್ತವನ್ನು ಕೊಡುವಂತೆ ಒತ್ತಾಯಿ ಸಲಾಗುವುದು ಎಂದು ಇದೇ ಸಂದರ್ಭ ದಲ್ಲಿ ತಿಳಿಸಿದರು .
ಕೋಲಾರ ಜಿಲ್ಲೆಯಾದ್ಯಂತ ಮಳೆಯಿಂದಾಗಿ ಇಷ್ಟು ಎಲ್ಲಾ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದರೂ ಜಿಲ್ಲಾಡಳಿತ ಅಥವಾ ಜನ ಪ್ರತಿನಿಧಿ ಗಳಾಗಲಿ ಗಮನ ಹರಿಸದೇ ರೈತರನ್ನು ನಿರ್ಲಕ್ಷ್ಯ ತೋರಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣ ಸ್ವಾಮಿ , ತಾಪಂ ಮಾಜಿ ಸದಸ್ಯ ಜಡೇರಿ ಗೋಪಾಲಗೌಡ , ಎಪಿಎಂಸಿ ವಾಜಿ ನಿರ್ದೇಶಕ ಹೊಳೂರು ನಾರಾಯಣ ಸ್ವಾಮಿ , ಮುಖಂಡರಾದ ಜನಪನಹಳ್ಳಿ ಆನಂದ್ , ಹೋಳೂರು ಸಂತೋಷ್ , ಎಚ್.ಎಸ್ ರೆಡ್ಡಿ , ಶ್ರೀರಾಮಪ್ಪ , ಮನು , ವಿವೇಕ್ , ರಮೇಶ್ , ಶುಭಾ , ಮುಂತಾದವರು ಇದ್ದರು
.