ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಂದಾವರ ವಾರ್ಷಿಕ ಸಾಮಾನ್ಯ ಸಭೆ


ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಂದಾವರ ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 22-08-2022ರಂದು ಸಂಘದ ವಠಾರದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ದೇವೇಂದ್ರ ಎನ್. ಉಗ್ರಾಣಿಯವರು ಸಂಘದ ವ್ಯವಹಾರ ಮತ್ತು ಆಡಳಿತ ವರದಿಯನ್ನು ಮಂಡಿಸಿದರು ಸಂಘದ ನಿರ್ದೇಶಕರಾದ ಎಸ್. ಜನಾರ್ಧನರವರು ಸ್ವಾಗತಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಮಾಧವ ಐತಾಳ್‍ರವರು ಪಶು ಆಹಾರ ಬಳಕೆ, ರಾಸುಗಳ ನಿರ್ವಹಣೆ ಮತ್ತು ಹಸುವಿನ ವಿಮೆ ಖನಿಜ ಮಿಶ್ರಣ ಬಳಕೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ ಕುಂದರ್‍ರವರು ಹಾಲಿನ ಗುಣ ಮಟ್ಟ ಶುದ್ಧ ಹಾಲು ಉತ್ಪಾದನೆ ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್. ರತ್ನಾಕರರವರು ಸಂಘವು ವರದಿ ಸಾಲಿನಲ್ಲಿ 2,36,176.70 ಪೈಸೆ ನಿವ್ವಳ ಲಾಭಾಂಶ ಬಂದಿರುತ್ತದೆ ಮತ್ತು ಹಾಲು ಉತ್ಪಾದಕ ಸದಸ್ಯರಿಗೆ 65% ಬೋನಸ್ ಹಾಗೂ 20% ಡಿವಿಡೆಂಡನ್ನು ನೀಡಲಾಗುವುದೆಂದು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೆ ಬಹುಮಾನ ನೀಡಲಾಯಿತು.