ಮನುಷ್ಯ ಆಧ್ಯಾತ್ಮದ ಕಡೆ ಗಮನ ಹರಿಸಬೇಕು:ಧರ್ಮದರ್ಶಿ ಎಸ್.ರಮೇಶ್ ಬಾಬು

ಶ್ರೀನಿವಾಸಪುರ: ಈ ಸಂದರ್ಭದಲ್ಲಿ, ಮನುಷ್ಯ ಆಧ್ಯಾತ್ಮದ ಕಡೆ ಗಮನ ಹರಿಸಬೇಕು ಎಂದು ಅರಿಕೆರೆ ಗ್ರಾಮದ ನಾಗನಾಥೇಶ್ವರ ದೇವಾಲಯದ ಧರ್ಮದರ್ಶಿ ಎಸ್.ರಮೇಶ್ ಬಾಬು ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದ ನಾಗನಾಥೇಶ್ವರ ದೇವಾಲಯದ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಜನರಲ್ಲಿ ಆಸ್ತಿಕತೆ ಹೆಚ್ಚುತ್ತಿದೆ. ದೇವಾಲಯಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿನ ಪುರಾತನ ನಾಗನಾಥೇಶ್ವರ ದೇವಾಲಯ, ಶ್ರೀರಾಮ ಮಂದಿರ ಹಾಗೂ ಗ್ರಾಮ ದೇವತೆ ಚೌಡೇಶ್ವರಿ ಮಾತೆ ದೇವಾಲಯಗಳಿಗೆ ರೂ.20 ಲಕ್ಷ ವೆಚ್ಚದಲ್ಲಿ ಒಂದೇ ಮಹಾದ್ವಾರ ನಿರ್ಮಿಸಲಾಗುತ್ತಿದೆ. ದೇವಾಲಯ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ರಾಜಣ್ಣ ಮಾತನಾಡಿ, ದೇವಾಲಯಗಳು ನಗರ ಕೇಂದ್ರೀಕರಣಗೊಳ್ಳುತ್ತಿವೆ. ದೇವಾಲಗಳಲ್ಲೂ ಲಾಭಾಕಾಂಕ್ಷೆ ಹೆಚ್ಚುತ್ತಿದೆ. ಆದರೆ ಅರಿಕೆರೆ ಗ್ರಾಮದ ದೇವಾಲಯಗಳು9 ಅದಕ್ಕೆ ಭಿನ್ನವಾಗಿವೆ. ಜನಪರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರರಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಜಗದೀಶ್, ಹರಿ, ಪ್ರೇಮ್‍ತೇಜ್, ಜಗನ್ ಇದ್ದರು.