ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು:ವೆಂಕಟಲಕ್ಷ್ಮಿಮನವಿ

ಶ್ರೀನಿವಾಸಪುರ : ಸರ್ಕಾರವು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಸೌಲಭ್ಯಗಳನ್ನು ಪರಿಚಯಿಸಿ ಸಮಾಜ ಕಟ್ಟಕಡೆಯ ವ್ಯಕ್ತಿಗೆ ಗ್ರಾಮವಾಸ್ಯವದ ಮೂಲಕ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಪವಿಭಾಗ ಅಧಿಕಾರಿ ವೆಂಕಟಲಕ್ಷ್ಮಿ ಮನವಿ ಮಾಡಿದರು .

ಮಾಸ್ತೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಗಲಹಳ್ಳಿ ಶನಿವಾರ ನಡೆದ ಗ್ರಾಮವಾಸ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು . ಗ್ರಾಮೀಣ ಭಾಗದಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅರ್ಜಿಗಳನ್ನು ಸಲ್ಲಿಸಿ ಮುಕ್ತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸುವ ಅವಕಾಶವಿರುವುದರಿಂದ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು .

ಅಲ್ಲದೆ ಪ್ರತಿಯೊಬ್ಬ ಮತದಾರರು ತಮ್ಮ ಗುರ್ತಿನ ಚೀಟಿಯನ್ನು ಕಡ್ಡಾಯವಾಗಿ ಆದಾರ್‌ ಕಾರ್ಡ್‌ಗೆ ಜೋಡಣೆ ಮಾಡಬೇಕು ಎಂದರು .

ತಹಶಿಲ್ದಾರ್ ಶರೀನ್‌ತಾಜ್ ಮಾತನಾಡಿ ಗ್ರಾಮದಲ್ಲಿ ಕಲ್ಯಾಣಿ , ರಸ್ತೆ , ಚರಂಡಿ , ಅಂಗನವಾಡಿ ಕೇಂದ್ರ ಹಾಗು ಶಾಲಾಕೊಠಡಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು .

ಪಿಂಚಣಿ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಿದರೆ ೭೨ ಗಂಟೆಗಳನ್ನು ಮಾಹಿತಿಯು ತಮ್ಮ ಮೊಬೈಲ್‌ಸಂಖ್ಯೆಗೆ ಬರುತ್ತದೆ ಎಂದರು .

ಪೌವತಿ ಖಾತೆ ದಾರರು ಮರಣಪ್ರಮಾಣ ಪತ್ರ ಹಾಗೂ ವಂಶವೃಕ್ಷ ಇತರೆ ದಾಖಲೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ , ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು .

ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು .

ಸಹಾಯಕ ನಿರ್ದೇಶಕ ರಾಮಪ್ಪ , ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ , ಗ್ರಾ.ಪಂ.ಅಧ್ಯಕ್ಷ ರವಿ , ಪಿಡಿಒ ಚನ್ನಪ್ಪ , ಉಪತಹಶೀಲ್ದಾರಾದ ಬಲರಾಮಚಂದ್ರೇಗೌಡ , ಗುರುಪಸಾದ್‌ , ಆರ್‌ಐ ಮುನಿರೆಡ್ಡಿ , ವಿಎಗಳಾದ ವಸುಂದರ , ಭೀಮರಾವ್ , ಕಾರ್ಯದರ್ಶಿ ಮಂಜುನಾಥ್ , ಜಿ . ಪಂ.ಮಾಜಿ ಸದಸ್ಯ ಶಶಿಕುಮಾರ್ , ಗ್ರಾ.ಪಂ. ಸದಸ್ಯೆ ಮಮತ , ರೈತ ಮುಖಂಡ ಬಚ್ಚೇಗೌಡ ಇದ್ದರು .