.
ದೇಶದ 75 ನೇ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಮೆಟಡೋರ್ ಡ್ರೈವರ್ ಅಸೋಸಿಯೇಷನ್ (ರಿ) ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಧ್ವಜಾರೋಹಣವನ್ನು ನೇರವೇರಿಸಿ ಜಾತಿ, ಮತ, ಧರ್ಮ ಭೇದವನ್ನು ಮರೆತು ಸಂಘಟಿತರಾಗಿ ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿದರು. ಪ್ರಸ್ತುತ ದೇಶವು ಎದುರಿಸುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಕೋಮುಸಂಘರ್ಷಗಳ ವಿರುದ್ಧ ಪಕ್ಷ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನು ಸಂವಿಧಾನದ ಆಶಯದಂತೆ ಸರಕಾರದ ವಿರುದ್ಧ ನಡೆಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿಯವರು ಈ ಸಂದರ್ಭದಲ್ಲಿ ಶುಭವನ್ನು ಕೋರಿ , ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿದರು.
ಸಭೆಯಲ್ಲಿ ಡ್ರೈವರ್ ಅಸೋಸಿಯೇಷನ್ (ರಿ) ಗೌರವ ಅಧ್ಯಕ್ಷರಾದ ಆನಂದ ಪೂಜಾರಿ, ಬಸವಣ್ಣ ವಕ್ವಾಡಿ, ಉಪಾಧ್ಯಕ್ಷರಾದ ಶೇಖರ್ ತಲ್ಲೂರ್, ಪುರಸಭೆಯ ಮಾಜಿ ಸದಸ್ಯರಾದ ಸುಭಾಷ್ ಪೂಜಾರಿ, ರವಿಕಲಾ ಶೇರಿಗಾರ್, ಪಂಚಾಯತ್ ಸದಸ್ಯರಾದ ವಿಜಯಧರ್, ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ, ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಸೇವಾದಳದ ಅಧ್ಯಕ್ಷರಾದ ಧರ್ಮ ಪ್ರಕಾಶ್, ಎಸ್ ಸಿ ಘಟಕದ ಅಧ್ಯಕ್ಷರಾದ ಅಶ್ವಥ್ ಕುಮಾರ್, ಬ್ಲಾಕ್ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಯುವ ಮುಖಂಡರಾದ ಸುನಿಲ್ ಪೂಜಾರಿ, ಸೋಶಿಯಲ್ ಮೀಡಿಯಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮಹಿಳಾ ಸದಸ್ಯರಾದ ಶೋಭಾ ಸಚ್ಚಿದಾನಂದ, ಜ್ಯೋತಿ ನಾಯಕ್ ,ಸುವರ್ಣ ಆಲ್ಮೇಡಾ, ಸಂಗೀತಾ, ಹಿರಿಯರಾದ ಕಾಳಪ್ಪ ಪೂಜಾರಿ, ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಕೇಶವ್ ಭಟ್, ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಕೆ ಪಿ ಅರುಣ್ ಪಟೇಲ್, ಸಚಿನ್ ಕುಮಾರ್, ಎಡೊಲ್ಫ್ ಡಿಕೋಸ್ತಾ, ಅಶೋಕ್, ಜೋಸೆಫ್ ರೆಬೆಲ್ಲೊ, ಜನಾರ್ದನ, ದಿನೇಶ್ ಬೆಟ್ಟ, ಸೂರ್ಯನಾರಾಯಣ, ಸುರೇಶ್ ಪೂಜಾರಿ, ಶ್ರೀಧರ ಬಸ್ರೂರು, ನರೇಂದ್ರ ಗಾಣಿಗ ಬಸ್ರೂರು, ಬಾಬು ಬಸ್ರೂರು, ರಫಿಕ್ ಬಸ್ರೂರು, ಕೃಷ್ಣ ಬಿ ಎನ್, ಭಾಸ್ಕರ, ಚಂದ್ರಶೇಖರ ಶೇರಿಗಾರ್, ನಾಗೇಂದ್ರ ಬಸ್ರೂರು, ಕರುಣಾಕರ , ಅಬ್ಬುಬ್ಬಕರ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.
ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಸ್ವಾಗತಿಸಿ, ಕಾರ್ಯದರ್ಶಿ ಮಾಣಿ ಉದಯರವರು ವಂದಿಸಿದರು. ನಂತರ ಸಂಘದ ಸದಸ್ಯರು ವಾಹನಗಳ ಪುರ ಮೆರವಣಿಗೆಯನ್ನು ನೆರವೇರಿಸಿದರು.