ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಿಂದ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ 10 ಸಾವಿರ ಲಡ್ಡುಗಳ ವಿತರಣೆ- ಪ್ರತಾಪ್ ಚಂದ್ರ ಶೆಟ್ಟಿಯವರಿಂದ ಚಾಲನೆ

ಉಡಪಿ/ ಕುಂದಾಪುರ. ಅ.15:ನಮ್ಮ ದೇಶದ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಕೋಟ ಬ್ಲಾಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ೧೦ ಸಾವಿರ ಲಡ್ಡುಗಳ ವಿತರಣೆಯನ್ನು ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ ವಿತರಣೆ ಮಾಡಿತು. ಮಾಜಿ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿಯವರು ತಮ್ಮ ನಿವಾಸದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಈ ಸಂದರ್ಭದಲ್ಲಿ ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ರೊನಾಲ್ಡ್ ಮನೋಹರ್ ಕರ್ಕಡ, ಮಂಜೀತ್ ನಾಗರಾಜ್, ಮಹ್ಮಮದ್ ಶೀಸ್, ಕಿಶನ್ ಖಾರ್ವಿ, ಪವನ ಬಂಗೇರ, ಕೆ.ಗಣೇಶ ಕೋಟ, ಉಪಸ್ಥಿರರಿದ್ದು, ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಮಾಜ ಸೇವಕ ಬರ್ನಾಡ್ ಡಿಕೋಸ್ತಾ, ಚಾಲನೇಯ ರೂಪವಾಗಿ ಲಡ್ಡುಗಳನ್ನು ಪ್ರತಾಪಚಂದ್ರ ಶೇಟ್ಟಿಯವರಿಗೆ ಹಸ್ತಾಂತರಿಸಿದರು.

 ಪ್ರತಾಪಚಂದ್ರ ಶೇಟ್ಟಿಯವರು ಇದೊಂದು ಉತ್ತಮ ಕಾರ್ಯಕ್ರಮ ಎಂದು ಶುಭ ಕೋರಿದರು.ಬ್ಲಾಕಗಳ ಎಲ್ಲ ಶಾಲೆಗಳಿಗೆ ಸಿಹಿ ತಿಂಡಿಯನ್ನು ಹಂಚಲಿಕ್ಕೆ ಈ ವರ್ಷ ಅಸಾಧ್ಯವಾಗಿದ್ದು ನಮ್ಮ ಗಮನಕ್ಕೆ ಬಂದಿದೆ, ಮುಂದಿನ ವರ್ಷಗಳಲ್ಲಿ ಎಲ್ಲರಿಗೂ ದೊರಕುವ ಹಾಗೆ ಪ್ರಯತ್ನ ಮಾಡಲಾಗುವುದೆಂದು. ರೊನಾಲ್ಡ್ ಕರ್ಕಡ ತಿಳಿಸಿದರು.

ಕುಂದಾಪುರ ಪುರಸಭಾ ವ್ಯಾಪ್ತಿಯ ಸರ್ಕಾರಿ ಪ.ಪೂ.ಕಾಲೇಜ್ ಮತ್ತು ಸರ್ಕಾರಿ ಬೋರ್ಡ್ ಪ್ರೌಢ ಶಾಲೆ, ಸಂತಮೇರಿಸ್ ಪ್ರೌಢ ಶಾಲೆ, ಸಂತ ಮೇರಿಸ್ ಹಿ.ಪ್ರಾ.ಶಾಲೆ, ಸಂತ ಮೇರಿ ಪಿ.ಯು. ಕಾಲೇಜ್, ಸಂತ ಜೋಸೆಫ್ ಪ್ರೌಢ ಶಾಲೆ, ಸಂತ ಜೋಸೆಫ್ ಹಿ.ಪ್ರಾ ಶಾಲೆ, ಅರ್.ಎನ್.ಶೆಟ್ಟಿ ಪ.ಪೂ.ಕಾಲೇಜ್ ಮತ್ತು ಪ್ರೌಢ ಶಾಲೆಗಳಿಗೆ ಲಡ್ಡುಗಳನ್ನು ವಿತರಿಸಲಾಯಿತು.

.