ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಉಪ ಮುಖ್ಯಮಂತ್ರಿಯಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ ಮಾಡಿದರು.
71 ವರ್ಷ ವಯಸ್ಸಿನ ನಿತೀಶ್ ಕುಮಾರ್ ಅವರು 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಚೌಹಾಣ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಿಹಾರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳು, ಜೊತೆಯಾಗುವ ಮೂಲಕ ಹೊಸದೊಂದು ರಾಜಕೀಯ ಅಧ್ಯಾಯ ಆರಂಭವಾಗಿದೆ. ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಎರಡನೇ ಬಾರಿಗೆ ಡಿಸಿಎಂ ಆಗಿದ್ದಾರೆ.
ಸಭಾಧ್ಯಕ್ಷರ ಆಯ್ಕೆ ಮತ್ತು ಸಂಪುಟ ವಿಸ್ತರಣೆ ನಂತರ ನಡೆಯಲಿದೆ. ವರದಿಗಳ ಪ್ರಕಾರ, ಮಹಾಮೈತ್ರಿಕೂಟದಲ್ಲಿ ಏಕೈಕ ಅತಿದೊಡ್ಡ ಪಕ್ಷವಾದ ಆರ್ಜೆಡಿಗೆ ಗೃಹ ಮತ್ತು ಸ್ಪೀಕರ್ ಸ್ಥಾನಗಳು ಸಿಗುವ ಸಾಧ್ಯತೆಯಿದೆ. ಮಹಾಘಟಬಂಧನ್ ನಲ್ಲಿರುವ ಎಲ್ಲಾ ಪಕ್ಷಗಳಿಗೆ ಆದ್ಯತೆ ನೀಡಿ ಸಚಿವ ಸಂಪುಟವನ್ನು ವಿಸ್ತರಿಸುವುದು ಇವರ ಉದ್ದೇಶವಾಗಿದೆ. 14 ಶಾಸಕರನ್ನು ಹೊಂದಿರುವ ಸಿಪಿಐ(ಎಂಎಲ್) ಈಗಾಗಲೇ ತಾನು ಸಂಪುಟಕ್ಕೆ ಸೇರುವುದಿಲ್ಲ ಮತ್ತು ಹೊರಗಿನಿಂದ ಸರ್ಕಾರವನ್ನುಬೆಂಬಲಿಸುವುದಾಗಿ ಹೇಳಿದೆ. ತಲಾ ಎರಡು ಪಕ್ಷಗಳನ್ನು ಹೊಂದಿರುವ ಸಿಪಿಎಂ ಮತ್ತು ಸಿಪಿಐನ ವಿಷಯದಲ್ಲೂ ಇದೇ ನಿಲುವಾಗಿದೆ. ವರದಿಗಳ ಪ್ರಕಾರ, ಕಾಂಗ್ರೆಸ್ಗೆ. ನಾಲ್ಕು ಸಚಿವ ಸ್ಥಾನಗಳು ಸಿಗುವ ಸಾಧ್ಯತೆಯಿದೆ.