ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಇವರ ಸಹಭಾಗಿತ್ವದಲ್ಲಿ ಚರ್ಮ ರೋಗ ತಪಾಸಣೆ ಶೆಭಿರ ಆಯೋಜಿಸಲಾಯಿತು. ಈ ಶಿಬಿರವನ್ನು ಖ್ಯಾತ ಚರ್ಮ ರೋಗ ತಜ್ನ ಡಾ. ಅರುಣ ಶೆಟ್ಟಿ, ಕೊರ್ಗಿ ಇವರು ಉಚಿತ ತಪಾಸಣೆ ನಡೆಸಿದರು ಅಲ್ಲದೇ ಸೋಪ್, ಕ್ರೀಮ್, ಲೋಷನ್ ಮಾತ್ರೆ ಇತ್ಯಾದಿ ಗಳನ್ನು ಉಚಿತವಾಗಿ ನೀಡಿದರು.
ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಯೋಜನ ಪಡೆದರು. ಡಾ. ಅರುಣ್ ಶೆಟ್ಟಿ ಕೆ. ಇವರು ಮಕ್ಕಳಿಗೆ ಚರ್ಮ ರೋಗ ಮತ್ತು ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿ ಹೇಳಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ, ರೆಡ್ ಕ್ರಾಸ್ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು. ಡಾ. ಶೇಖರ್ ಬಿ. (ಕಾಮರ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಯುವ ರೆಡ್ ಕ್ರಾಸ್ ಕನ್ ವೇನರ್ ) ಇವರು ಸ್ವಾಗತಿಸಿದರು. ವೆಂಕಟರಾಮ ಭಟ್ (ಅಸಿಸ್ಟೆಂಟ್ ಪ್ರೊಫೆಸರ್) ಇವರು ವಂದನಾರ್ಪಣೆ ಗೈದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಗಣೇಶ್ ಆಚಾರ್ಯ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆದ ನಾಗರಾಜ ಯು. ಉಪಸ್ಥಿತರಿದ್ದರು.