ಶ್ರೀನಿವಾಸಪುರ 4 : ವಚನಗಳು ಎಂದರೆ ಶರಣರ ಕೈಗನ್ನಡಿ, ಸಮಾಜಕ್ಕೆ ದಾರಿ ದೀಪ ವಚನಗಳಲ್ಲಿ ಮೂರು ವಿಧಗಳಿದ್ದು, ವಿಡಂಬಾತ್ಮಕ ವಚನ, ಆಧ್ಯಾತ್ಮಿಕ ವಚನ ಮತ್ತು ಸಂವಾದಾತ್ಮಕ ವಚನ ಈ ಮೂರು ವಚನಗಳನ್ನು ಅರಿತಿದ್ದೇ ಆದರೆ ಮಾನವನ ಜೀವನ ಸಾರ್ಥಕ ಎಂದ ಅವರು ಈ ಎಲ್ಲವನ್ನೂ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಕೋಲಾರ ಬಾಲಕರ ಕಾಲೇಜಿನ ಪ್ರಾದ್ಯಾಪಕ ಪ್ರೊ. ಶಂಕರಪ್ಪ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬುಧವಾರ ಪಟ್ಟಣದ ಶ್ರೀ ವೇಣು ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಮಾವಿನ ನಾಡಿನಲ್ಲಿ ವಚನಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನ ವಚನ ಜ್ಯೋತಿ ಬಳಗದ ಅಧ್ಯಕ್ಷರಾಗ ಎಸ್.ಪಿನಾಕಪಾನಿ ಆಶಯ ನುಡಿಯೊಂದಿಗೆ ಮಾತನಾಡಿ ನಡೆ ಮತ್ತು ನುಡಿ ಒಂದಾಗದಿದ್ದರೆ ಬದುಕು ದುಸ್ಥರವಾಗುತ್ತದೆ. ಬಸನವಣ್ಣ ಸೇರಿದಂತೆ ಅಂಬೇಡ್ಕರ್ , ಅಕ್ಕಮಹಾದೇವಿ ಹೀಗೆ ಈ ದೇಶಕ್ಕೆ ಕೊಡುಗೆ ನೀಡಿದಂತಹ ಮಹಾನ್ ನಾಯಕರು ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಬಸವಣ್ಣನವರ ವಚನಗಳು ಸಮಾಜದ ಸುಧಾಣೆಗಾಗಿ ಸಹಕಾರಿಯಾಗಿವೆ. ಅವರ ಅನುಭವ ಮಂಟಪವೇ ಇದಕ್ಕೆ ಸಾಕ್ಷಿ ಎಂದು ವಚನಗಳ ಮೂಲಕ ಸುಮಾರು 2ಗಂಟೆಗಳ ಕಾಲ ಮಕ್ಕಳಿಗೆ ಅವರ ತಂಡದಿಂದ ವಚನಗಳನ್ನು ವಾಚಿಸುವ ಮೂಲಕ ಸಮಾಜಕ್ಕೆ ಶರಣರ ತತ್ವಗಳನ್ನು ಸಾರಿದರು ಹಾಗೂ ಬಸವಣ್ಣನವರು ನಡೆದ ದಾರಿ ಮತ್ತು ಅವರ ಸಿದ್ದಾಂತಗಳ ಬಗ್ಗೆ ತಿಳಿಸಿಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಅಧ್ಯಕ್ಷೆ ಪಿ.ಎಸ್.ಮಂಜುಳಾ, ಜಿಲ್ಲಾ ಸಂಘನಾ ಕಾಯದರ್ಶಿಗಳಾದ ಎನ್.ಮುನಿವೆಂಕಟೇಗೌಡ, ಕೆ.ಎಲ್. ಪರಮೇಶ್ವರ್, ಜಿಲ್ಲಾ ಮಹಿಳಾ ಪ್ರತಿನಿದಿ ಮಾಯಾ ಬಾಲಚಂದ್ರ, ಜಿಲ್ಲಾ ಪ್ರಧಾನ ಸಂಚಾಲಕರಾದ ಆರ್.ರವಿಕುಮಾರ್, ಪಿ.ನಾರಾಯಣಪ್ಪ , ತಾಲ್ಲೂಕು ಕಸಾಪ ಪ್ರತಿನಿದಿಗಳಾದ ವೇಣುಗೊಪಾಲ್, ಶ್ರೀರಾಮ್, ರಾಮಚಂದ್ರೇಗೌಡ, ಜಿ.ವಿ.ಚಂದ್ರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.