ಕೋಲಾರ:- ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಜುಲೈ 28 ರಂದು ನಡೆಯಲಿದೆ.
ಮಹಿಳಾ ಮತ್ತು ವರ್ತಮಾನ (ಸಾಹಿತ್ಯ ಮತ್ತು ಸಮಾಜ) ಕುರಿತು ನಡೆಯಲಿರುವ ಈ ವಿಚಾರ ಸಂಕಿರಣವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆರಂಭಗೊಂಡ ಮೇಲೆ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಮೊದಲ ವಿಚಾರ ಸಂಕಿರಣವಾಗಿದೆ
ಜು.28ರ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೋ.ಚಂದ್ರಶೇಖರ ಕಂಬಾರ ಅವರು ಈ ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದು, ಕುಲಪತಿಗಳಾದ ಪ್ರೋ. ನಿರಂಜನ್ ವಾನಳ್ಳಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೆಜಿಎಫ್ ಪೊಲೀಸ್ ವಧಿಷ್ಟಾಧಿಕಾರಿ ಹಾಗೂ ಪ್ರಸಿದ್ಧ ಬರಹಗಾರ್ತಿ ಧರಣಿದೇವಿ ಮಾಲಗತ್ತಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತೆ ವಿಜಯಮ್ಮ ಅಧ್ಯಕ್ಷತೆ ವಹಿಸಲಿದ್ದು, ಶಾಂತಲ ಧರ್ಮರಾಜ್- ಮಹಿಳೆ ಮತ್ತು ಅಭಿವ್ಯಕ್ತಿ ಮತ್ತು ಕೆ .ಫಾರೀಫಾ -ಮಹಿಳೆ ಮತ್ತು ದೌರ್ಜನ್ಯಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ಮಧ್ಯಾಹ್ನ 2.15 ರಿಂದ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ ಪ್ರೋ. ತಮಿಳ್ ಸಲ್ವಿ – ತೃತೀಯ ಲಿಂಗಗಳ ಸವಾಲುಗಳು ಮತ್ತು ಡಾ. ಗೀತಾ ವಸಂತ – ಮಹಿಳೆ ಮತ್ತು ಕರೋನೋತ್ತರ ಕಾಲದ ವಿಘಟನೆಗಳು ಕುರಿತು ಪ್ರಬಂಧ ಮಂಡಿಸಲಿದ್ದಾರೆ.
ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಹಿಳಾ ಹೋರಾಟಗಾರ್ತಿ ಅಕೈಪದ್ಮಶಾಲಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮನು ಬಳಿಗಾರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕುಲಪತಿಗಳಾದ ಪ್ರೋ. ನಿರಂಜನ ವಾನಳ್ಳಿರವರು ಅಧ್ಯಕ್ಷತೆ ವಹಿಸುತ್ತಾರೆ. ಈ ವಿಚಾರ ಸಂಕೀರ್ಣಕ್ಕೆ ಸಾರ್ವಜನಿಕರು ಕೂಡ ಭಾಗವಹಿಸುವಂತೆ ಕುಲ ಸಚಿವರು ಕೋರಿದ್ದಾರೆ.