ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಮಿಥಿಲೇಶ್ ಮತ್ತು ಸಲ್ಮಾನ್  ಇವರ IPS ಅಧಿಕಾರಿಯಾಗುವ ಆಸೆ ಈಡೇರಿಕೆ!!

ಬೆಂಗಳೂರು:ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಕೊನೆಯ ಆಸೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಡೇರಿಸಿದ್ದಾರೆ.


ಬೆಂಗಳೂರಿನ ಮಿಥಿಲೇಶ್ ಮತ್ತು ಕೇರಳದ ಮೊಹಮದ್ ಸಲ್ಮಾನ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ ಬಾಲಕರು ಇವರು ಜೀವನದಲ್ಲಿ IPS ಅಧಿಕಾರಿಯಾಗುವ ಕನಸು ಕಂಡಿದ್ದರು. ಈ ಇಬ್ಬರು ಬಾಲಕರು ಈ ಆಸೆಯನ್ನು ಮೇಕ್ ಎ ವಿಶ್ ಇಂಡಿಯಾ ಎಂಬ ಎನ್ ಜಿ ಒ ಕಾರ್ಯಕರ್ತರ ಬಳಿ ತಮ್ಮ ಆಸೆ ಹೇಳಿಕೊಂಡಿದ್ದರು.


ಅದರಂತೆ ಎನ್ ಜಿ ಒ, ಸಂಸ್ಥೆ, ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿದರು. ಇದರಂತೆ ಸಲ್ಮಾನ್ ಮಿಥಿಲೇಶ್ ಮತ್ತು ಸಲ್ಮಾನ್ ಅವರಿಗೆ ಪೊಲೀಸ್ ಯುನಿಫಾರ್ಮ್ ಹಾಕಿಸಿ ಒಂದು ದಿನ‌ ಐಪಿಎಸ್ ಖುರ್ಚಿಯಲ್ಲಿ ಕುಳ್ಳಿರಿಸಿ ಪೊಲೀಸರ ಕಾರ್ಯವ್ಯಾಪ್ತಿಯನ್ನು ವಿವರಿಸಿ ಅವರ ಆಸೆಯನ್ನು ಈಡೇರಿಸಲಾಯಿತು.

ಎನ್ ಜಿಒ ಮತ್ತು ಬೆಂಗಳೂರು ಪೊಲೀಸರ ಈ ಕ್ರಮಕ್ಕೆ ಭಾರೀ‌ ಮೆಚ್ಚುಗೆ ವ್ಯಕ್ತವಾಗಿದೆ.