ಎಂ.ಎಲ್.ಎ. ಯಿಂದ ಅಲ್ಲ! ಎಮ್ಮೆಯಿಂದ ಬಸ್ಸು ತಂಗುದಾಣ ಉದ್ಘಾಟನೆ!!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಗ್ರಾಮದಲ್ಲಿ ನಿರ್ಮಾಣವಾದ ಬಸ್‌ ನಿಲ್ದಾಣವನ್ನು ಗ್ರಾಮಸ್ಥರ ಎಮ್ಮೆ ಮೂಲಕ ಉದ್ಘಾಟಿಸಿದ್ದಾರೆ.

ಶಾಸಕ ಮತ್ತು ಸಂಸದರ ಗಮನ ಸೆಳೆಯಲು ಅಲ್ಲಿಯ ಗ್ರಾಮಸ್ಥರೇ ಸೇರಿಕೊಂಡು ತಾತ್ಕಾಲಿಕ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡಿ. ಎಮ್ಮೆಯಿಂದ ರಿಬ್ಬನ್‌ ಕಟ್‌ ಮಾಡಿಸುವ ಮೂಲಕ ಉದ್ವಾಟನೆ ಮಾಡಿದರು.

ದಶಕದ ಹಿಂದೆಯೇ ಬಾಳೆಹೊಸೂರು ಗ್ರಾಮದ ಬಸ್‌ ನಿಲ್ದಾಣ ಬಿದ್ದು ಹೋಗಿತ್ತು. ಈ ಕುರಿತು ಸ್ಥಳೀಯ ಶಾಸಕ ಸಂಸದರಿಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಸೂಕ್ತ ಭರವಸೆ ಸಿಗದ ಕಾರಣ ಗ್ರಾಮಸ್ಥರೇ ಚಪ್ಪರದ ಬಸ್‌ ನಿಲ್ದಾಣ ಮಾಡಿ, ಎಮ್ಮೆಯಿಂದ ಉದ್ರಾಟನೆಯನ್ನು ಮಾಡಿಸಿ ಸಮಾಜತಾಣದಲ್ಲಿ ಮನೆಮಾತಾಗಿದ್ದಾರೆ..

ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್‌ ನಿಲ್ದಾಣ ನಿರ್ಮಾಣವಾಗಿದ್ದು, 10 ವರ್ಷದ ಹಿಂದೆಯೇ ಅದರ ಛಾವಣಿ ಕುಸಿದು ಬಸ್‌ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು.

ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್‌ ಉದಾಸಿ ಅವರಿಗೆ ಬಸ್‌ ನಿಲ್ದಾಣದ ದುರಸ್ತಿ ಬಗ್ಗೆ ಮನವರಿಕೆ ಮಾಡಲಾಗಿದ್ದು, ಮನವಿಯನ್ನೂ ಕೂಡ ಸಲ್ಲಿಸಲಾಗಿತ್ತು ಎಂದು ರೈತ ಮುಖಂಡ ಲೋಕೇಶ್‌ ಜಾಲವಾಡಗಿ ಅವರು ಹೇಳ್ತಾರೆ. ಈ ಕುರಿತು ಸ್ಪಂದನೆ ಸಿಗದ ಕಾರಣ ವಿಶೇಷ ಪ್ರತಿಭಟನ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಆದರೆ ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಇದರ ಬಿಸಿ ಮುಟ್ಟುವುದೊ ಇಲ್ಲವೊ ಎನ್ನುವುದು ಅನಮಾನ !!