ಕೋಲಾರ:- ಬೆಂಗಳೂರು ಉತ್ತರ ವಿವಿಯ ಗಣಿತಶಾಸ್ತ್ರ ವಿಭಾಗಕ್ಕೆ ದ್ವಿತೀಯ ಘಟಿಕೋತ್ಸವದಲ್ಲಿ ಮೊದಲ ಐದು ರ್ಯಾಂಕ್ ಬಂದಿದ್ದು, ಪ್ರಥಮ ರ್ಯಾಂಕ್ ಗಳಿಸಿದ ಎಸ್.ರುಷಿತಾ ಅವರಿಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಚಿನ್ನದ ಪದಕ ನೀಡಿ ಪುರಸ್ಕರಿಸಿದರು.
ವಿವಿಯ ವಿದ್ಯಾರ್ಥಿಗಳಾದ ರಾಜು ಅವರಿಗೆ ದ್ವಿತೀಯ ರ್ಯಾಂಕ್, ಸ್ವಾತಿ ಅವರಿಗೆ ತೃತೀಯ ರ್ಯಾಂಕ್, ಉಮ್ರಾಭಾನು ಅವರಿಗೆ 4ನೇ ರ್ಯಾಂಕ್ ಹಾಗೂ ಸುಷ್ಮಾ ಅವರಿಗೆ 5ನೇ ರ್ಯಾಂಕ್ ದೊರೆತಿದೆ.
ಪ್ರಥಮ ರ್ಯಾಂಕ್ ಸಾಧಕಿ ಎಸ್.ರುಷಿತಾ ಅವರಿಗೆ ಮಾತ್ರ ರಾಜ್ಯಪಾಲರು ಚಿನ್ನದ ಪದಕ ನೀಡಿ ಪುರಸ್ಕರಿಸಿದ್ದು, ಅವರು ಕೋಲಾರ ಜಿಲ್ಲೆಯ ಮುಳಬಾಗಿಲಿನವರಾಗಿದ್ದು, ಅಕ್ಕಸಾಲಿಗ ವೃತ್ತಿ ಮಾಡುತ್ತಿರುವ ಬಾಲಾಜಿ, ತಾಯಿ ಶಶಿಕಲಾ ಅವರ ಪುತ್ರಿಯಾಗಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ, ಕುಲಸಚಿವರಾದ ವೆಂಕಟೇಶಮೂರ್ತಿ, ಡಾಮಿನಿಕ್, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲಿಂಗ್ ಸದಸ್ಯರು, ವಿವಿಧ ವಿಭಾಗಗಳ ಡೀನ್‍ಗಳು, ಗೌರವ ಡಾಕ್ಟರೇಟ್ ಪುರಸ್ಕøತರಾದ ಶರದ್ ಶರ್ಮ, ಬಲ್ಲೇಶ್ ಭಜಂತ್ರಿ ಮತ್ತಿತರರಿದ್ದರು.