ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮಿಸ್ಬಾ ತಬಸ್ಸುಮ್ ಳನ್ನು ಸನ್ಮಾನ :ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ : ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ , ವಿದ್ಯಾರ್ಥಿಗೆ ಕಲಿಯುವ ಆಸಕ್ತಿ ಇರಬೇಕು – ಶಿಕ್ಷಕನಿಗೆ ಕಲಿಸುವ ಆಸಕ್ತಿ ಇರಬೇಕು ಗುರು ಶಿಷ್ಯರ ಭಾಂದವ್ಯ ಉತ್ತಮವಾಗಿದರೆ , ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವಿದ್ಯಾರ್ಥಿನಿಯೇ ಸಾಕ್ಷಿ ರೋಟರಿ ಕ್ಲಬ್ ಸೆಂಟೆರಲ್ ಡಾ|ವೆಂಕಟಾಚಲ.ಪಟ್ಟಣದ ಅಜಾದ್ ರಸ್ತೆಯ ವಿದ್ಯಾರ್ಥಿ ಮನೆ ಹತ್ತಿರ ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್ ಸೆಂಟರಲ್ ಹಾಗೂ ವಾಕಿಂಗ್ ಗಳೆಯರ ಬಳಗದಿಂದ ವತಿಯಿಂದ ಬುಧವಾರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಭಾಗದಲ್ಲಿ ( ರಾಸಾಯನಶಾಸ್ತ್ರ ) ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ಳನ್ನು ಸನ್ಮಾನಸಿ ಮಾತನಾಡಿದರು .


ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರಥಮ ದರ್ಜೆ ಕಾಲೇಜುವರೆಗೂ ಸರ್ಕಾರಿ ಶಾಲಾ ಕಾಲೇಜಿನಲ್ಲಿಯೇ ಓದಿ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ವಿಜ್ಞಾನ ವಿಭಾಗದಲ್ಲಿ ( ರಾಸಾಯನಶಾಸ್ತ್ರ ) ದಲ್ಲಿ ಚಿನ್ನದ ಪದಕವನ್ನು ಪಡೆದಿರುವುದ ನಮ್ಮ ತಾಲ್ಲೂಕಿಗೆ ಹೆಮ್ಮವಿಚಾರವಾಗಿದೆ .


ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದು , ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಒಳ್ಳೆಯ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು , ಆರ್ಥಿಕ ಸ್ಥಿತಿವಂತರು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸದರೆ ಒಳ್ಳೆಯ ಇಂತಹ ಅನೇಕ ವಿದ್ಯಾರ್ಥಿಗಳು ಚಿನ್ನಪದಕವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು .


ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಣ್ಣವೀರಯ್ಯ ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡಿದರೆ ಅವರ ಜೀವನಕ್ಕೆ ಆಧಾರ ಸ್ಥಂಭವಾಗುತ್ತದೆ .


ಈ ಹೆಣ್ಣುಮಗು ಇತರೆ ಹೆಣ್ಣುಮಕ್ಕಳಿಗೆ ಪೇರಣೆಯಾಗಿದ್ದು , ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಹೆಣ್ಣುಮಗುವಿಗೆ ಒಳ್ಳೆಯ ಶಿಕ್ಷವನ್ನು ಕೊಡಿಸಿ ವಿದ್ಯಾಂತರಾಗಿಸಬೇಕು ಎಂದು ಮನವಿ ಮಾಡಿದರು .


ಪುರಸಭೆ ಉಪಾಧ್ಯಕ್ಷೆ ಆಯಿಶಾ ನಯಜ್ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು .


ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವದು ಕಷ್ಟ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರುಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು .


ಸೈಯದ್ ಖಾದರ್ , ಮಿಲನ್ಸರ್ ಮಾವು ಮಂಡಿ ಮಾಲೀಕ ಮುಜಮಿಲ್ ಖಾನ್ ,ಪುರಸಭೆ ಸದಸ್ಯ ಕೆ ಅನೀಸ್ ಅಹಮದ್ ಜಾಮಿಯಾ ಮಸೀದಿ ಅಧ್ಯಕ್ಷ ಝಾಹಿದ್ ಅನ್ಸಾರಿ , ಮುಸ್ಲಿಂ ಎಂಪ್ಲಾಯಿಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಸೈಯದ್ ಅಸ್ಗರ್ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.


ಈ ಸಂದರ್ಭದಲ್ ಆರ್ ಎಂ ಎಂ ತನ್ವೀರ್ ಫ್ರೂಟ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗೆ ೨೫ ಸಾವಿರರೂಗಳನ್ನು , ಜಾವಿದ್ ಅನ್ಸಾರಿ ೫ ಸಾವಿರ , ಅಕ್ಟ‌ ಶರೀಫ್ ೫ ಸಾವಿರ , … ಸಯ್ಯದ್ ಖಾದರ್ ೫ ಸಾವಿರ , ಡಾ || ವೆಂಕಟಾಚಲ ರವರು ೫ ಸಾವಿರರೂಗಳ ಪೋತಾಹ ಈ ತ್ಸಾಹ ಧನ ನೀಡಿದರು . ಬ್ಲಾಕ್ ಕಾಂಗ್ರೆಸ್‌ ಅಕ್ಟರ್‌ ಶರೀಪ್ , ಜಾಮೀಯ ಮಸೀದಿಯ ಅಧ್ಯಕ್ಷರಾದ ಜಾಯಿದ್ ಅನ್ಸರಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಸಯ್ಯದ್ ಖಾದರ್ , ಉಪನ್ಯಾಸಕರು ನವೀನ್‌ಕುಮಾರ್‌ , ಮೃತ್ಯಂಯಜಯ , ರೋಟರಿ ಸಂಸ್ಥೆಯ ಸದಸ್ಯರಾದ ಸೀತರೆಡ್ಡಿ , ಶ್ರೀನಿವಾಸರೆಡ್ಡಿ ಇತರರು ಇದ್ದರು .