ಕೋಲಾರ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಬಿ .ಶಿವಕುಮಾರ್ ಪದಗ್ರಹಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,         (ಸಂಪಾದಕರು : ಬರ್ನಾಡ್ ಡಿ’ಕೋಸ್ತಾ)

ಕೋಲಾರ ಜು.09 : ಕೋಲಾರ ರೋಟರಿ ಭವನದಲ್ಲಿ 2022-23 ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಮಂಡಳಿ ಸದಸ್ಯರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ರೋಟರಿ ಆರ್.ಐ ಜಿಲ್ಲೆ 3190 ನಿಯೋಜಿತ ಜಿಲ್ಲಾ ರಾಜ್ಯಪಾಲರಾದ ರೋ. ಉದಯ್ ಕುಮಾರ್ ಭಾಸ್ಕರ್ ರವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನೂತನ ಅಧ್ಯಕ್ಷರಾದ ಬಿ.ಶಿವಕುಮಾರ್ ರವರಿಗೆ ಅಧ್ಯಕ್ಷರ ಕಾಲರ್ ಹಾಕುವುದರ ಮೂಲಕ ಈ ರೋಟರಿ ಸಾಲಿಗೆ ಚಾಲನೆ ನೀಡಲಾಯಿತು.
ಈ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರಾಮನಾಥ್ ರವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ರೋ ರಾಮಚಂದ್ರ ಗೌಡರು 2021/22 ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವರಧಿ ಯನ್ನು ಮಂಡಿಸಿದರು.
ನೂತನ ಅಧ್ಯಕ್ಷರಾದ ರೋ ಬಿ.ಶಿವಕುಮಾರ್ ರವರು ತಮ್ಮ ಅಂಗೀಕೃತ ಭಾಷಣದಲ್ಲಿ ಮಾತನಾಡುತ್ತ ಹಿಂದಿನ ಅಧ್ಯಕ್ಷರುಗಳ ಮಾರ್ಗದರ್ಶನದೊಂದಿಗೆ ಈ ಬಾರಿಗೆ ಕಾಯ, ವಾಚ, ಮನಸ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿತ್ತೇನೆ. ಕಟ್ಟ ಕಡೆಯ ಸೌಲಭ್ಯ ವಂಚಿತ ಪ್ರಜೆಗೆ ರೋಟರಿ ಸೇವೆಯನ್ನು ತಲುಪಿಸಲು ಪ್ರಯತ್ನಿಸುತ್ತೇನೆ ಎಂದರು. ಸಭೆಗೆ ಆಗಮಿಸಿದ ಕೋಲಾರ ಜಿಲ್ಲೆಯ ಎಲ್ಲ ಕ್ಲಬ್ ಗಳ ಸದಸ್ಯರಿಗೆ ಸ್ನೇಹಿತರ ಬಳಗಕ್ಕೆ ಹಾಗಿ ಅನುದಾನಿತ ಶಾಲಾ ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು.
ವಲಯ ರಾಜ್ಯಪಾಲರಾದ ರೋ ಎ. ಎಂ.ಲಕ್ಷ್ಮೀನಾರಾಯಣ ಮಾತನಾಡುತ್ತ ರೋ.ಬಿ.ಶಿವಕುಮಾರ್ ರವರು ಅಧ್ಯಕ್ಷರಾಗಿರುವುದು ಸಂತಸದ ವಿಚಾರ. ಹೆಚ್ಚು ರೋಟರಿ ಸದಸ್ಯರನ್ನು ತೊಡಗಿಸಿಕೊಂಡು ಸಹಕಾರದೊಂದಿಗೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಕೋಲಾರಗೆ ನೂತನವಾಗಿ 7 ಜನ ವೆಂಕಟರತ್ನಮ್ಮ, ಸಹನಾ ಬಿ.ಯು, ನಾಗಾನಂದ್ ಕೆಂಪರಾಜ್, ಸಂಗಮೇಶ್, ಮಂಜುನಾಥ್.ವಿ, ನೀಲಕಂಟೇ ಗೌಡ, ರೆಡ್ಡಿ ಪ್ರಸಾದ್ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು ಇವರಿಗೆ ಸಹಾಯಕ ರಾಜ್ಯಪಾಲರಾದ ರೋ ಸರಿತಾ ಬಾಲಾಜಿ ರವರು ರೋಟರಿ ಪಿನ್ ಹಾಕುವುದರ ಮೂಲಕ ಸೇರ್ಪಡೆಗೊಳಿಸಿದರು.
ಆರ್ ಐ ಜಿಲ್ಲೆ 3190 ನ ನಿಯೋಜಿತ ಜಿಲ್ಲಾ ರಾಜ್ಯಪಾಲರಾದ ರೋ ಉದಯ್ ಕುಮಾರ್ ಭಾಸ್ಕರ ನೂತನ ಅಧ್ಯಕ್ಷರು ಹಾಗೂ ಮಂಡಳಿ ಸದಸ್ಯರಿಗೆ ರೋಟರಿ ಮಂಡಳಿ ನಿರ್ದೇಶಕರ ಪಿನ್ ಹಾಕಿ ಅಂಗೀಕೃತಗೊಳಿಸಿದರು , ಈ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿಯು.ಸಿ. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಗೊಂಡಿರುವ ರೋಟರಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆರ್ ಐ ಜಿಲ್ಲೆ 3190 ನ ನಿಯೋಜಿತ ಜಿಲ್ಲಾ ರಾಜ್ಯಪಾಲರಾದ ರೋ ಉದಯ್ ಕುಮಾರ್ ಭಾಸ್ಕರ ರವರು ಮಾತನಾಡುತ್ತ ಮುಂದಿನ ರೋಟರಿ ಸೇವಾ ಯೋಜನೆಗಳ ಬಗ್ಗೆ ರೋಟರಿ ಸಂಸ್ಥೆಯ ಬಗ್ಗೆ ಹಾಗೂ ನೂತನ ಅಧ್ಯಕ್ಷರಾಗಿರುವ ಶಿವಕುಮಾರ್ ರವರಿಗೆ ಕೆಲವು ಸಲಹೆ ಹಾಗೂ ಮಾರ್ಗದಶನಗಳನ್ನು ನೀಡಿದರು. ರೋಟರಿ ಸಂಸ್ಥೆಯ ಕಾರ್ಯವ್ಯಾಪ್ತಿ ಹಾಗೂ ಅದರ ಹಿರಿಮೆಯನ್ನು ತಿಳಿದಿಕೊಟ್ಟರು.
ಈ ಸಂಧರ್ಭದಲ್ಲಿ ಹಿರಿಯ ರೋಟರಿಯನ್ ಹಾಗೂ ಮಾಜಿ ಅಧ್ಯಕ್ಷರಾದ ರೋ ಸಿ .ಆರ್.ಅಶೋಕ್ ರವರು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ರೋಟರಿ ಕೋಲಾರ ನಂದಿನಿ ಅಧ್ಯಕ್ಷರಾರ ಕೆ.ವಿ.ಶಂಕರಪ್ಪ, ರೋಟರಿ ಸೆಂಟ್ರಲ್ ಕೋಲಾರರ ಅಧ್ಯಕ್ಷರಾದ ಸಿ.ಎಂ.ಆರ್ ಶ್ರೀನಾಥ್, ಕೋಲಾರ ಲೆಕ್ ಸೈಡ್ ಅಧ್ಯಕ್ಷರಾದ ರೋ ಶಿಲ್ಪ, ಶ್ರೀನಿವಾಸಪುರ ಅಧ್ಯಕ್ಷರಾದ ಶಿವರಾಜ್, ಮುಳಬಾಗಿಲು ಅಧ್ಯಕ್ಷರಾದ ಅರುನ್, ಬಂಗಾರ ಪೇಟೆ ಅಧ್ಯಕ್ಷರಾದ ಎಲ್.ಮಂಜುನಾಥ್, ಅಶ್ವಥ್, ಎಲ್.ಆರ್ ರಾಮಕೃಷ್ಣಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಪ್ಪಯ್ ಗೌಡ್ರು, ಅನುದಾನಿತ ಶಾಲಾ ಜಿಲ್ಲಾಧ್ಯಕ್ಷರಾದ ಮಂಜುನಾಥ್, ಜಾಬಿರ್, ಧನಂಜಯ್, ವೆಂಕಟೇಶ್, ಬೆಂಗಳೂರು ಪೀನ್ಯಾ ಉದ್ಯೋಗ್ ಕ್ಲಬ್ ಮಧು, ತಿರುಪತಿ ಝೋನ್ ವಲಯ ರಾಜ್ಯಪಾಲರಾದ ರವೀಂದ್ರನಾಥ್ ಹಾಗೂ ಬಿ.ಶಿವಕುಮಾರ್ ಕುಟುಂಬ ವರ್ಗ, ಸ್ನೇಹ ಬಳಗ ಮತ್ತು ಕೋಲಾರ ರೋಟರಿ ಸದಸ್ಯರು ಭಾಗವಹಿಸಿದ್ದರು.