ಪಿಯುಸ್ ನಗರ್ ಧರ್ಮಕೇಂದ್ರದಲ್ಲಿ ಮೂಳೆ ತಪಾಸಣ ಶಿಬಿರ

ವರದಿ: ಜೆನ್ನಿ ಡೆಸಾ ಪಿಯುಸ್ ನಗರ          (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಕುಂದಾಪುರ, ಜು.8: 2022 ಜುಲೈ 7 ರಂದು ಪಿಯುಸ್ ನಗರ್ ಧರ್ಮಕೇಂದ್ರದ ಸಭಾ ಭವನದಲ್ಲಿ ಮೂಳೆ ತಪಾಸಣಾ ಶಿಬಿರ ನಡೆಯಿತು. ಇಗರ್ಜಿಯ ಆರೋಗ್ಯ ಹಾಗೂ ಸ್ತ್ರೀ ಆಯೋಗದ ವತಿಯಿಂದ ಈ ಶಿಬಿರ ನಡೆಯಿತು
ಪ್ರಾರ್ಥನಾ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಧರ್ಮಗುರು ವಂ| ಆಲ್ಬರ್ಟ್ ಕ್ರಾಸ್ತಾರವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟ್ವಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಡುಪಿಯ ಸಮಾಜ ಸೆವಕ ಪ್ರಕಾಶ್ ಆಂದ್ರಾದೆಯವರ ನೇತ್ರತ್ವದಲ್ಲಿ ನಡೆದ ಈ ಶಿಬಿರದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಾಲನಾ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಸ್ತ್ರೀ ಆಯೋಗದ ಸಂಚಾಲಕಿ ಜೆನ್ನಿ ಡೇಸಾ ಸ್ವಾಗತಿಸಿದರು. ಚರ್ಚ್ ಆಯೋಗಗಳ ಸಂಯೋಜಕಿ ಲೀನಾ ತಾವ್ರೊ ವಂದಿಸಿದರು. ಆರೋಗ್ಯ ಆಯೋಗದ ಸಂಚಾಲಕಿ ರೇಶ್ಮಾ ಡಿಸೋಜಾರವರು ಕಾರ್ಯಕ್ರಮ ನಿರೂಪಿಸಿದರು. ಧರ್ಮ ಕೇಂದ್ರದ 90 ಮಂದಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದರು.