ಸರ್ಕಾರಿ ಕೆರೆಯ ಸುಳ್ಳು ದಾಖಲೆ ಮಾಡಿ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿದ ಅಧಿಕಾರಿಗಳ ವಿರುದ್ದ ಕೇಸ್ ದಾಖಲು ಮಾಡಲು ಒತ್ತಾಯ

ಕೋಲಾರ,ಜೂ-23, ವಕ್ಕಲೇರಿ ಹೋಬಳಿ, ಆಲಹಳ್ಳಿ ಗ್ರಾಮದ ಸ.ನಂ.127 ರ 3.23 ಗುಂಟೆ ಸರ್ಕಾರಿ ಕೆರೆ ಕರಾಬು ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿ ಮಾಡಿ ಸನ್‍ಲಾರ್ಜ್ ಕಂಪನಿಗೆ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿಳಾದ ವೆಂಕಟರಾಜು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳ ಪೋರ್ಜರಿ ಸಹಿಯನ್ನು ಪತ್ತೆ ಹಚ್ಚಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಕೆರೆ ಕಟ್ಟೆ ಜಮೀನನ್ನು ಉಳಿಸಿದಂತಹ ತಹಶೀಲ್ಧಾರ್ ನಾಗರಾಜ್‍ರವರಿಗೆ ರೈತ ಸಂಘದಿಂದ ದನ್ಯವಾದಗಳು, ಇದೇ ರೀತಿ ತಾಲ್ಲೂಕು ಕಚೇರಿಯ ಮೂಲೆ ಮೂಲೆಯಲ್ಲೂ ದಲ್ಲಾಳಿಗಳ ಆರ್ಭಟಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಸಲಹೆ ನೀಡಿದರು.
ಸರ್ಕಾರದ ಆಸ್ತಿಗಳನ್ನು ಉಳಿಸಬೇಕೆಂಬ ಛಲ ನಮ್ಮದು ಸರ್ಕಾರದ ಸಂಬಳ ಪಡೆದು ಐಷಾರಾಮಿ ಜೀವನಕ್ಕೆ ಹಣ ಸಕಾಗದೆ ಅಕ್ರಮ ಆಸ್ತಿಗಾಗಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಉದ್ಯೋಗ ಕಂದಾಯ, ಸರ್ವೆ ಅಧಿಕಾರಿಗಳದೆಂದು ಜಿಲ್ಲಾದ್ಯಂತ ತಾಲ್ಲೂಕು ಕಛೇರಿಗಳ ಅವ್ಯವಸ್ಥೆ ಬಗ್ಗೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಒಂದು ತಾಲ್ಲೂಕು ಕಛೇರಿಯಲ್ಲಿ ಬದುಕಿದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಾರೆ. ಮತ್ತೊಂದು ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ಆಲಹಳ್ಳಿ ಸ.ನಂ. 127 ರಲ್ಲಿ 3 ಎಕರೆ 23 ಗುಂಟೆಯನ್ನು ಸನ್‍ಲಾರ್ಜ್ ಕಂಪನಿಯವರಿಗೆ ಸರ್ಕಾರಿ ಕೆರೆ ಕಟ್ಟೆಯನ್ನೇ 50 ಲಕ್ಷ ಲಂಚ ಪಡೆದು ಕೋಲಾರ ತಾಲ್ಲೂಕು ಕಚೇರಿಯಲ್ಲಿನ 4-5 ಜನ ಕಂದಾಯ ಅಧಿಕಾರಿಗಳು ಸರ್ಕಾರದ ಕಾರ್ಯದರ್ಶಿಯಿಂದ ತಿರಸ್ಕøತವಾಗಿರುವ ಉಲ್ಲೇಖ ಪತ್ರವನ್ನು ಭೊಗಸ್ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಸರ್ವೆ ಇಲಾಖೆಯಿಂದ ಮಂಜೂರು ಮಾಡಬಾರದೆಂಬ ಆದೇಶವನ್ನೇ ಉಲ್ಲಂಘನೆ ಮಾಡಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡುವ ಮುಖಾಂತರ ಕಂದಾಯ ಇಲಾಖೆಯ ಬ್ರಹ್ಮಾಂಡ ಭ್ರಷ್ಠಾಚಾರಕ್ಕೆ ಕನ್ನಡಿಯಾಗಿದೆ ಎಂದು ಅವ್ಯವಸ್ಥೆಯ ವಿರುದ್ದ ಕಿಡಿಕಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಸರಿಪಡಿಸಬೇಕಾದ ಸರ್ಕಾರ ಕೋಲಾರ ಜಿಲ್ಲೆಗೆ ಕೂಗಳತೆ ದೂರದಲ್ಲಿದ್ದರೂ ಜಿಲ್ಲೆಯನ್ನು ನಿರ್ಲಕ್ಷೆ ಮಾಡುವ ಜೊತೆಗೆ ಸರ್ಕಾರಿ ಕಛೇರಿಗಳು ಬಡ ಕೂಲಿ ಕಾರ್ಮಿಕರ ರಕ್ತ ಹೀರುವ ಇಲಾಖೆಗಳಾಗಿ ಮಾರ್ಪಟ್ಟಿದರು ಸರಿಪಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಮಕವಸ್ತ ಸಚಿವರಾಗಿ ಬಿ.ಜೆ.ಪಿ ಕಾರ್ಯಕರ್ತರ ಸಭೆಗಳಿಗೆ ಸೀಮಿತವಾಗಿದ್ದಾರೆಂದು ಆರೋಪ ಮಾಡಿದರು.
ಇನ್ನು ಜಿಲ್ಲೆಯ ತಾಲ್ಲೂಕು ಆಡಳಿತದ ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿದರೆ ಇನ್ನು ಜನ ಸಾಮಾನ್ಯರಿಗೆ ನ್ಯಾಯ ಸಿಗುವುದುಂಟೆ ಕಟ್ಟಕಡೆಯ ರೈತ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಗಬೇಕಾದ ಅಕ್ರಮ ದಾಖೆಲ ಸೃಷ್ಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಕಂದಾಯ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸಲು ಮಾನ್ಯ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ವೆಂಕಟರಾಜು ರವರು ಅಕ್ರಮ ಸರ್ಕಾರಿ ಕೆರೆ ಕಟ್ಟೆಯನ್ನು ಮಂಜೂರು ಮಾಡಲು ತನ್ನ ಸಹಿಯನ್ನು ನಕಲು ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ದಂಡಾಧಿಕಾರಿಗಳಿಗೆ ಸೂಚನೆ ಮಾಡಿ ತನಿಖೆ ನಡೆಸಿ ಅಮಾನತ್ತು ಮಾಡುವ ಬರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಕೋಲಾರ ತಾಲ್ಲೂಕು ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ನಾರಾಯಣಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ವಿಭಾಗೀಯ ಕಾರ್ಯದರ್ಶಿ ಪಾರುಕ್‍ಪಾಷ, ವಿಜಯ್‍ಪಾಲ್, ವಿಶ್ವ, ಬಂಗಾರಿ ಮಂಜು, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ಮುಳಬಾಗಿಲು ತಾ.ಅದ್ಯಕ್ಷ ಯಲುವಳ್ಳಿ ಪ್ರಬಾಕರ್, ಮುಂತಾದವರು ಇದ್ದರು.