ಸಂತ ಮೇರಿ ಮಹಾವಿದ್ಯಾಲಯ, ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ‘ಎನ್.ಸಿ.ಸಿಯ ವಿಶ್ವ ಯೋಗ ದಿನಾಚರಣೆ

JANANUDI.COM NETWORK


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ “ವಿಶ್ವ ಯೋಗ ದಿನಾಚರಣೆ ಯನ್ನು” ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಆಯುಷ್ ಮಂತ್ರಾಲಯ ನೀಡಿದ ಯೋಗ ವಿಡಿಯೋ ಪ್ರಾಯೋಗಿಕ ಪ್ರದರ್ಶನವನ್ನು ಅನುಸರಿಸಿ ಆಚರಿಸಲಾಯಿತು .
ಯೋಗ ಒಂದು ಸರ್ವರೋಗ ನಿವಾರಣಾ ತಂತ್ರವಾಗಿದೆ .ಯೋಗವನ್ನು ಕೇವಲ ವಿಶ್ವ ಯೋಗ ದಿನಾಚರಣೆಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಜೀವನಶೈಲಿಯಲ್ಲಿ ಜನಗಳು ಯೋಗ ಮಾಡುವ ಮೂಲಕ ನಿತ್ಯ ಆರೋಗ್ಯವಂತ ರಾಗುವರು ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ವಿಠ್ಠಲ್ ನಾಯ್ಕರವರು ಮಾತನಾಡಿ, ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿದರು ಮತ್ತು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಎನ್.ಸಿ.ಸಿಯ ಬಿ ‘ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಕೆಡೆಟ್ ಮೋಹಿತ ಎನ್ ಸಾಲಿಯಾನ, ಆಶಿಶ್ ಪ್ರಸಾದ್ , ಧೀರಜ್ ಆಚಾರ್ಯ, ರಿಯಾನ್ ಡಿಸೋಜಾ, ವಿನೋಲ್ ನೊರೊನ್ಹಾ, ಮಂಜುನಾಥ್ ಅಮರಾವಟಿ, ಶ್ರೇಯಸ್ ವಿ ಕೋಟಿಯನ್, ದೀಪಕ್, ಸೂರಜ್,ರತನ್ ಕೋಟ್ಯಾನ್, ಶೆಟ್ಟಿ ತರುಣ್ ರಮೇಶ, ಜನಿಸಿಯಾ ನೊರೊನ್ಹಾ, ಎಲ್ರುಶಾ ಮಿಲಿನಾ ಡಿಸಾ, ರಿಯಾ ಆನ್ ನೆವಿಲ್ ಲೋಬೋ ನವ್ಯ ಆಚಾರ್ಯ, ದೀಕ್ಷಾ ಪಿ ಸಾಲಿಯಾನ್, ದೀಪ್ತಿ, ರಕ್ಷಿತಾ, ನಿವೇದಿತ ಪೂಜಾರಿ, ರಿಯಾ ಸರೀನಾ ಡಿಸೋಜಾ, ಸೆರಾ ಮಾತೆ ಮ್ಯಾಕ್ವಾನ್ ಇವರನ್ನುಅಭಿನಂದಿಸಲಾಯಿತು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ, ವಿಶ್ವ ಯೋಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜೂನಿಯರ್ ಅಂಡರ್ ಆಫೀಸರ್ ಹರ್ಷಿತಾ, ಸುರಕ್ಷಾ ಉಪಸ್ಥಿತರಿದ್ದರು.
ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು. ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಸರ್ವರನ್ನೂ ಸ್ವಾಗತಿಸಿ , ಕೆಡೆಟ್ ಸುಶ್ಮಿತಾ ಎಸ್ ಅಮೀನ್ ವಂದಿಸಿದರು. ಕೆಡೆಟ್ ಶೆಟ್ಟಿಗಾರ್ ಹೇಮಶ್ರೀ ಸುದರ್ಶನ್ ಕಾರ್ಯಕ್ರಮವನ್ನು ನಿರೂಪಿಸಿದರು.