2ನೇ ಪಿಯುಸಿ ಫಲಿತಾಂಶ ಪ್ರಕಟ; 61.88 ರಷ್ಟು ವಿದ್ಯಾರ್ಥಿಗಳು ಉತೀರ್ಣ ಈಬಾರಿಯೂ ಬಾಲಕಿಯರೇ ಮೇಲುಗೈ

JANANUDI.COM NETWORK

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಫಲಿತಾಂಶ ಪ್ರಕಟಿಸಿದ್ದಾರೆ. 61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಪಿಯು ಬೋರ್ಡ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಈಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.61.88 ಮಕ್ಕಳು ತೇರ್ಗಡೆಯಾಗಿದ್ದಾರೆ ಎಂದು. ತಿಳಿಸಿದರು. ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಅನುಮಾನವಿದ್ದರೆ ಸ್ಕ್ಯಾನ್‌ ಕಾಪಿ ಪಡೆಯಬಹುದಾಗಿದ್ದು, ಇಂದಿನಿಂದ ಜೂನ್‌ 30ವರೆಗೆ ಅವಶಾಶಪಿದೆ. ಪ್ರತಿ ವಿಷಯದ ಸ್ಕ್ಯಾನ್‌ ಕಾಪಿಗೆ 530 ರೂ ಶುಲ್ಕ ವಿರುತ್ತದೆ. ಇನ್ನು 91106 ವಿದ್ಯಾರ್ಥಿಗಳು ಡಿಸ್ಟ್ರಕ್ಷನ್‌ ನಲ್ಲಿ ಉತ್ತೀರ್ಣವಾಗಿದ್ದು, ಗಣಿತದಲ್ಲಿ 14,200 ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌ ಗಳಿಸಿದ್ದಾರೆ. ಕನ್ನಡದಲ್ಲಿ 563 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಇಂಗ್ಲೀಷ್‌ ನಲ್ಲಿ ಇಬ್ಬರು. ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.

ಈ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಉಡುಪಿ ಜಿಲ್ಲೆ 2ನೇ ಸ್ಥಾನ, ವಿಜಯಪುರ ಜಿಲ್ಲೆ ಮೂರನೇ ಸ್ಥಾನ, ಬೆಂಗಳೂರು ದಕ್ಷಿಣ 4, ಉತ್ತರ ಕನ್ನಡ 5 ಹಾಗೂ ಚಿತ್ರದುರ್ಗ ಕೊನೇ ಸ್ಥಾನ ಪಡೆದಿದೆ.

ಕಲಾ ವಿಭಾಗದಲ್ಲಿ- ಬಳ್ಳಾರಿ ಜಿಲ್ಲೆಯ ಇಬ್ಬರು ಟಾಪರ್‌ ಆಗಿದ್ದು, ಶ್ವೇತಾ ಬೀಮಶಂಕರ ಬೈರಗೊಂಡ 600ಕ್ಕೆ 594 ಅಂಕ. ಪಡೆದಿದ್ದು, ಸಾಹನಾ ಮಡಿವಾಳರ್‌ ಕೂಡ 594 ಅಂಕ ಪಡೆದು ಮೊದಲ ಸ್ಥಾನ ಹಡೆದಿದ್ದಾರೆ.

ಕಲಾ ವಿಭಾಗದಲ್ಲಿ- ಬಳ್ಳಾರಿ ಜಿಲ್ಲೆಯ ಇಬ್ಬರು ಟಾಪರ್‌ ಆಗಿದ್ದು, ಶ್ವೇತಾ ಬೀಮಶಂಕರ ಬೈರಗೊಂಡ 600ಕ್ಕೆ 594 ಅಂಕ ಪಡೆದಿದ್ದು, ಸಾಹನಾ ಮಡಿವಾಳರ್‌ ಕೂಡ 594 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ – ಜೈನ್‌ ಪಿಯು ಕಾಲೇಜು ವಿದ್ಯಾರ್ಥಿ ಮಾನವ್‌ ವಿನಯ ಕೇಜ್ರಿವಾಲ್‌ 596 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.

ಸೈನ್ಸ್‌ ವಿಭಾಗದಲ್ಲಿ- ಸಿಮ್ರಾನ್‌ ಶೇಷಾರ್‌ 600ಕ್ಕೆ 598 ಅಂಕಗಳಿಸಿದ್ದರೆ, ಮೊಹಮ್ಮದ್‌ ರಫೀಕ್‌ 598 ಅಂಕ, ಸಾಯಿ ಚಿರಾಗ್‌ 597 ಅಂಕ ಪಡೆದಿದ್ದಾರೆ.