ನೀರಿನ ಇಂಜಿನಿಯರ್‌ ! ಮನೆಯಲ್ಲಿ ಬಂಗಾರದ ಖಜಾನೆ !! ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಹೆಗ್ಗಣ

JANANUDI.COM NETWORK

ಉಡುಪಿ : ರಾಜ್ಯದ ಹಲಪು ಕಡೆ ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಎಸಿಬಿ ಯಿಂದ ಹಲವಾರು ದಾಳಿಗಳು ನಡೆದಿವೆ. , ಉಡುಪಿಯಲ್ಲಿ ನಡೆದ ದಾಳಿಯಲ್ಲಿ, ಸಹಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌ ಹರೀಶ್‌ ಮನೆಗೂ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಸಣ್ಣ ನೀರಾಪರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಇಲಾಖೆಯ ಸಹಾಯಕ ಇಂಜಿನಿಯರ್‌ ಆಗಿ ಹರೀಶ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯ ಕೊರಂಗ್ರಪಾಡಿಯ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಧಿಕಾರಿಯ ಬಂಗಾರದ ಖಜಾನೆ ಕಂಡು ಸ್ವತಃ ಅಧಿಕಾರಿಗಳೇ ನಿಬ್ಬೆರರಾಗಿದ್ದಾರೆ.

ನೀರಾಪರಿ ಮತ್ತು ಅಂತರ್ಜಲ  (ನೀರಿನ) ಇಲಾಖೆಯ ಸಹಾಯಕ ಇಂಜಿನಿಯರ್‌ ಆಗಿ ಇಷ್ಟು ದೊಡ್ಡ ಭ್ರಷ್ಟಾಚಾರ ಮಾಡಿ ಬಂಗಾರದ ಖಜಾನೆ ಮಾಡಿಕೊಂಡ ಹೆಗ್ಗೆಣವನ್ನು ಹಿಡಿದಂತ್ತಾಗಿದೆ.

ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ  ಅವರ ಮನೆಯಲ್ಲಿ ಎರಡು ಕೆಜಿಗೂ ಅಧಿಕ ಚಿನ್ನಾಭರಣ, ಸುಮಾರು 5 ಲಕ್ಷ ರೂಪಾಯಿ ನಗದು, ಮೂರು ವಾಹನಗಳು, 30 ಕ್ಕೂ ಹೆಚ್ಚು ಸರ, ನೆಕ್ಲೆಸ್,  ಬ್ರಾಸ್ಗೆಟ್‌, 15 ಕ್ಕೂ ಹೆಚ್ಚುಚಿನ್ನದ ಬಳೆ, ಚಿನ್ನದ ಒಡವೆಗಳು,  ದುಬಾರಿ ಬೆಲೆಯ ವಾಚುಗಳು, ಚಿನ್ನದ ತಟ್ಟಿ, ಚಿನ್ನದ ತಗಡು ಅಲ್ಲದೆ ದೇವರ ಮೂರ್ತಿಗಳು ಪತ್ತೆಯಾಗಿವೆ. ಅಲ್ಲದೆ ಆಸ್ತಿ ಪತ್ರ ದಾಖಲೆಗಳನ್ನು ಕೂಡ ಅಧಿಕಾರಿಗಳು ಪಶಪಡಿಸಿಕೊಂಡಿದ್ದಾರೆ  ಎಂದು ಮಾಹಿತಿ ದೊರೆತಿದೆ.