ಡಾಲರ್ ಎದುರು ರೂಪಾಯಿಯ ಮೌಲ್ಯ ದಾಖಲೆಯ ಕನಿಷ್ಟ ಮಟ್ಟಕ್ಕೆ ಇಳಿಯಿತು

JANANUDI.COM NETWORK

ಮುಂಬೈ: ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಸೋಮವಾರದಂದು ಸಾರ್ವಕಾಲಿಕ ಕುಸಿತ ಕಂಡಿದೆ.
ಸೋಮವಾರ 77.84 ರೂಪಾಯಿ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 78.23 ರೂ.ಗೆ ಕುಸಿಯಿತು. ಪ್ರತಿ ಡಾಲರ್‌ಗೆ ಈಗ 78.23 ರೂಪಾಯಿ ಪಾವತಿಸಬೇಕಿದೆ. ಇದು ಇಲ್ಲಿಯವರೆಗಿನ ಅತಿ ಕೆಟ್ಟ ದಾಖಲೆಯಾಗಿದೆ.
ವಿದೇಶಿ ಬಂಡವಾಳ ಹೂಡಿಕೆಯ ಗರಿಷ್ಠ ಹಿಂತೆಗೆತ ಮತ್ತು ಹಣದುಬ್ಬರವು ಲಮೆರಿಕದ ಡಾಲರ್‌ ಎದುರು ಭಾರತೀಯ ರೂಪಾಯಿಯ ಮೌಲ್ಯವನ್ನು ಹೀನಾಯ ರೀತಿ ಕುಗ್ಗಿಸಿದೆ. ಎಂದು ಹೇಳಲಾಗಿದೆ. ಈ ಮಧ್ಯೆ, ಮುಂಬೈ ಷೇರು ಮಾರುಕಟ್ಟೆಯೂ ಹಿನ್ನಡೆ ಅನುಭವಿಸಿದೆ. ಸೆನ್ಸೆಕ್ಸ್‌ 1,506 ಅಂಕ ಕಳೆದುಕೊಂಡರೆ, ನಿಫ್ಟಿ 442 ಅಂಕಕ್ಕೆ ಇಳಿದಿದೆ.
ಕಚ್ಚಾತೈಲ ಬೆಲೆ ಏರಿಕೆಯೂ ಭಾರತೀಯ ಕರೆನ್ಸಿ ಶಕ್ತಿಯನ್ನು ಕುಗ್ಗಿಸಿದೆ. ಬ್ರೆಂಟ್‌ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸುತ್ತೇವೆ ಎಂದು ಆಡಿಕೊಂಡಿದ್ದವರು, ಈಗ ಬಾಯಿ ಮೇಲೆ ಬಡಿದುಕೊಳ್ಳುವ ಸ್ಥಿತಿ ಎದುರಾಗಿದೆ.