ಭಂಡಾರ್ಕಾರ್ಸ್ ಕಾಲೇಜ್ – ಸೈಬರ್ ಕ್ರೈಮ್ ಸಾಮಾನ್ಯ ಜನರ ಮೇಲೆ ಹೆಚ್ಚಾಗಿ ನಡೆಯುವಂಥದ್ದು ವಕೀಲ ರಾಘವೇಂದ್ರ ಚರಣ ನಾವಡಾ

JANANUDI.COM NETWORK

ಕುಂದಾಪುರ: ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇ ಇದೆ.ಸೈಬರ್ ಕ್ರೈಂ ಎನ್ನುವಂತದ್ದು ಸಾಮಾನ್ಯ ಜನರ ಮೇಲೆ ಹೆಚ್ಚಾಗಿ ನಡೆಯುವಂಥದ್ದು ಎಂದು ವಕೀಲರಾದ ರಾಘವೇಂದ್ರ ಚರಣ ನಾವಡಾ ಹೇಳಿದರು. ಜೂ. 4 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ನಡೆಸಲಾದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಮೊಬೈಲ್ ನಮಗೆ ಎಷ್ಟು ಉಪಯೋಗಕಾರಿಯೋ ಅಷ್ಟೇ ಉಪದ್ರಕಾರಿಯೂ ಹೌದು. ಸೈಬರ್ ಅಪರಾಧ ಮಾಡಿದವರು ಅವರ ಎಲ್ಲಾ ಕುರುಹುಗಳನ್ನು ಅಳಿಸಿ ಬಿಡುತ್ತಾರೆ ಈ ಕಾರಣದಿಂದಾಗಿ ಸೈಬರ್ ಕ್ರೈಮ್ ಸಂಖ್ಯೆಯಲ್ಲಿ ದಿನೇದಿನೇ ಏರಿಕೆಯಾಗುತ್ತಿದೆ.
ಇದರಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳನ್ನು ಕಾಣಬಹುದು. ವ್ಯಕ್ತಿಯ ವಿರುದ್ಧ ಅಪರಾಧ, ಗುರುತಿನ ಪರೀಕ್ಷೆ, ಹ್ಯಾಕಿಂಗ್ ಮತ್ತು ಸೈಬರ್ ಸ್ಟಾಕಿಂಗ್.ಮೊಬೈಲ್ ಬಳಕೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಲ್ಲಾ ಕೆಲಸಗಳಿಗೂ ನಾವು ಫೋನುಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ನಾವು ಹೊಸ ಹೊಸ ಅಪ್ಗಳನ್ನು ಡೌನ್ಲೋಡ್ ಮಾಡುವಾಗ ಅಥವಾ ಎಸ್.ಎಂ.ಎಸ್ ಗಳನ್ನು ಕಳುಹಿಸುವಾಗ ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಏಕೆಂದರೆ ಯಾವ ರೀತಿ ಇಂದಾದರೂ ನಮ್ಮ ವೈಯಕ್ತಿಕ ಮಾಹಿತಿಗಳು ಉಪಯೋಗ ಗೊಳ್ಳುವ ಸಾಧ್ಯತೆ ಇದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಎಲ್ಲಾ ದೊಡ್ಡ ದೊಡ್ಡ ಅಪರಾಧಗಳನ್ನು ಮೊಬೈಲ್ ನಿಂದಲೇ ಹಿಡಿಯಲಾಗುತ್ತದೆ.ಕ್ಲೌಡ್ ಎನ್ನುವಂತಹ ಗೂಗಲ್ ನ ಅ ಡಿಯಲ್ಲಿ ಬರುವಂತಹ ಒಂದು ಸಾಫ್ಟ್ವೇರ್ ನಿಂದ ಅಪರಾಧಿಯ ಎ ಲ್ಲಾ ಅಳಿಸಲಾದ ಎಸ್.ಎಂ.ಎಸ್, ಫೋಟೋಗಳು ಇತರ ಮಾಹಿತಿಗಳನ್ನು ಪುನಃ ನೋಡಬಹುದು.ಹಾಗಾಗಿ ಮೊಬೈಲ್ ಮತ್ತು ಅಂತರ್ಜಾಲದ ಬಳಕೆಯ ಸಂದರ್ಭದಲ್ಲಿ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಎನ್.ಪಿ ನಾರಾಯಣ್ ಶೆಟ್ಟಿಯವರು ವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಯಶವಂತಿ. ಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶುಭಂಕರ್ ಆಚಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಿಂಚನ ಮತ್ತು ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು.