ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಇನ್ವರ್ಟರ್ ಕೊಡುಗೆ-ಪುಸ್ತಕ ವಿತರಣೆ ಕಾರ್ಯಕ್ರಮ

JANANUDI.COM NETWORK

ಕುಂದಾಪುರ,ಜೂ.10: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಶಾಲಾ ಗುಮಾಸ್ತೆಯಾದ ವಿನಯಾ ಡಿಕೋಸ್ತಾರವರು ಕೊಡಮಾಡಿದ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಇನವರ್ಟರನ್ನು (ಜೂ.10) ಪತಿ ಬರ್ನಾಡ್ ಡಿಕೋಸ್ತಾ ಜೊತೆ ಉದ್ಘಾಟಿಸಿ ಶಾಲೆಗೆ ಹಸ್ತಾತಂರಿಸಿದರು. “ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಎಂದಿಗೂ ಕೀಳರಿಮೆ ಮಾಡಿಕೊಳ್ಳಬಾರದು, ಇಲ್ಲಿ ದೊರಕುವ ಜ್ನಾನ ಸಂಪತ್ತಿನಿಂದ ಸಮಾಜದಲ್ಲಿ ಉನ್ನತ  ಸ್ಥಾನ ಮಾನ ಗಳಿಸಿ, ಮುಂದೆ ನೀವು ಇತರರಿಗೆ ದಾನ ಮಾಡುವ ಕ್ಷಮತೆಯನ್ನು ಪಡೆದುಕೊಳ್ಳಬೇಕು. ದಾನವನ್ನು ಸೂಕ್ತ ಸಂದರ್ಭದಲ್ಲಿ, ಸೂಕ್ತವಾದ ಕಾರ್ಯಗಳಿಗೆ, ಶಿಕ್ಷಣಕ್ಕೆ ದಾನ ಮಾಡಲು ಮುಂದಾಗಿರಿ, ಅದರಿಂದ ಹಲವರ ಜೀವನ ಬೆಳಗಲು ಸಾಧ್ಯವಾಗುತ್ತೆ’ ಎಂದು ಪತ್ರಕರ್ತ ಸಾಹಿತಿ ಬರ್ನಾಡ್ ದಿಕೋಸ್ತಾ ತಿಳಿಸಿದರು.

ಪ್ರಸ್ತುತ ಶೈಕ್ಷಣಿಕ ಸಾಲಿನ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಐವನ್ ಡಿ ಅಲ್ಮೇಡಾ ಇವರು ನೋಟ್ ಪುಸ್ತಕಗಳನ್ನು ಉದಾರ ಕೊಡುಗೆಯಾಗಿ ನೀಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಸ್ಟರ್ ಸಂಗೀತ ಇವರು ಸರಕಾರ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.ಶಾಲೆಗೆ ಉದಾರ ಕೊಡುಗೆ ನೀಡಿದ ಶ್ರೀಮತಿ ವಿನಯ ಡಿಕೋಸ್ಬ ,ಬರ್ನಾಡ್ ಜೆ ಡಿಕೋಸ್ಟಾ ಹಾಗೂ ಐವನ್ ಡಿ ಅಲ್ಮೇಡಾ ಇವರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ಶಾಲೆಗೆ ನೀಡಿದ ಕೊಡುಗೆಯ ಬಗ್ಗೆ ಪ್ರಶಂಸನೀಯ ಮಾತನಾಡಿದರು. ಶಿಕ್ಷಕರಾದ ಸರ್ ಅಶೋಕ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶ್ರೀಲತಾ ಇವರು ವಂದಿಸಿದರು.