ಸರಕಾರಿ ಅಸ್ಪತ್ರೆಯಿಂದ ಶವ ನೀಡಲು ಲಂಚದ ಬೇಡಿಕೆ: ಅದಕ್ಕಾಗಿ ಪೋಷಕರು ಭಿಕ್ಷಾಟನೆ ಮಾಡಿದರು

JANANUDI.COM NETWORK

ಬಿಹಾರ : ಪುತ್ರನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಳ್ಳಲು ವೃದ್ಧ ದಂಪತಿ ಹಣಕ್ಕಾಗಿ ಬೀದಿಗಿಳಿದು ಭಿಕ್ಷೆ ಬೇಡಿದಂತಹ ದಾರುಣ ಘಟನೆಯೊಂದು.ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಈ ಘಟನೆ ಇವತ್ತಿನ ಭಾರತದ ಪರಿಸ್ಥಿತಿಯ ದರ್ಪಣವಾಗಿ ಗೋಚರಿಸುತ್ತದೆ. ಬಡತನ ನಿವಾರಿಸುವ ಸಲುವಾಗಿ ಕೆಲಸ ಮಾಡಬೇಕಾದ ಇಂದಿನ ಸರಕಾರ, ಮತದ ಆಶೆಗಾಗಿ ಧಾರ್ಮಿಕ ಭಾವನೆಯನ್ನು ಕೆರಳಿಸಿ, ಹಿಂದೂ ಧರ್ಮ ಉದ್ದಾರ ಮಾಡುತ್ತೇವೆ ಎಂದು ನಂಬಿಸಿ, ಭಾರತವನ್ನು, ಉಳಿದ ದೇಶಗಳಿಕಿಂತ ಹಿಂದುಳಿದಂತೆ ಮಾಡಲು ಹೋರಟಿದೆ.

   ಭಾರತದಲ್ಲಿ ಧರ್ಮದಾಹದ ಹಿನ್ನೆಲೆಯಲ್ಲಿ ಲಂಚ,ಹಿಂಸೆ, ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮೈಗೂಡಿಸಿವೆಯಂದರೆ, ಅತಿ ಬಡವ ಸರ್ಕಾರಿ ಆಸ್ಪತ್ರೆಯಲ್ಲಿ  ಸತ್ತು ಹೋದ ಪುತ್ರನ ಶವವನ್ನು ಹೆತ್ತವರಿಗೆ ಹಸ್ತಾಂತರಿಸಲು ಆಸ್ಪತ್ರೆಯ ಸಿಬ್ಬಂದಿ 50 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಹಣಕ್ಕಾಗಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುವಂತಾಗಿದೆ.ಇದೀಗ ಬೀದಿ ಬದಿಯಲ್ಲಿ ವೃದ್ಧ ದಂಪತಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಈ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಆಸ್ಪತ್ರೆ ಆಡಳಿತ ಮಂಡಳಿ ಎಚ್ಚೆತ್ತಿದ್ದು ಈ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

    ಇಂತಹ ಪರಿಸ್ಥಿತಿ ಭಾರತದಲ್ಲಿರುವಾಗ, ಭಾರತ ಜಗದ್ಗುರು ಆಗುವ ಕನಸು ಕಾಣುತಿರುವುದು, ಇದೆದಂತಹ ಅಸಹಜ ಕನಸು. ಮೊದಲು ಬಡತನ ನೀಗಿಸಿ, ವೈದ್ಯಕೀಯ ವಲಯದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಿ.

ಹೊಟ್ಟೆ ಹಸಿವೆಗೆ, ಕಷ್ಟ ಕಾರಪ್ಣ್ಯದಲ್ಲಿ, ಅನ್ಯ ಮಾರ್ಗವಿಲ್ಲದೆ ಭಿಕ್ಷೆ ಬೇಡುವ ಭಿಕ್ಷುಕರಿದ್ದಾರೆ!
ಅದಲ್ಲದೆ ನಮ್ಮ ಭಾರತದಲ್ಲಿ ಹಲವಾರು ವರ್ಗದ ಭಿಕ್ಷುಕರಿದ್ದಾರೆ ಅವರೆಂದರೆ ಕೆಲವೊಂದು ಸರಕಾರಿ ನೌಕರರು, ಅಧಿಕಾರಿಗಳು, ವೈದ್ಯಕೀಯ ನೌಕರರು, ವೈದ್ಯರು, ಮಧ್ಯವರ್ತಿಗಳು ರಾಜಕಾರಣಿಗಳು, ಮಂತ್ರಿಗಳು ಆದರೆ ಅವರು ತೆಗೆದುಕೊಳ್ಳುವುದಕ್ಕೆ ಮತ್ತೊಂದು ಹೆಸರು ಲಂಚ, ಇನ್ನೊಂದು ಹೆಸರು ಇನಾಮು (ಗಿಫ್ಟ್) !!
ಇವರೆಲ್ಲಾ ಆಧುನಿಕ ಭಿಕ್ಷುಕರು ಸ್ವಾಮಿ !!!