ಕಡ್ಡಾಯ ಶಿಕ್ಷಣ ಹಕ್ಕಿನಡಿ  ಅರ್ಜಿಗಳನ್ನು ಅಂಗಿಕರಿಸದೆ ಅಧಿಕಾರಿಗಳು ಆಕ್ರಮ – ದಲಿತ ಯುವ ಸೇನೆ ಆರೋಪ

ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಕಡ್ಡಾಯ ಶಿಕ್ಷಣ ಹಕ್ಕು ( ಆರ್‌ಟಿಇ ) ಅಡಿಯಲ್ಲಿ ಅರ್ಜಿಗಳನ್ನು ಅಂಗಿಕರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಜಿಗಳನು ಅಂಗಿಕರಿಸದೆ ಎ೦ದು ಕರ್ನಾಟಕ ದಲಿತ ಯುವ ಸೇನೆ ಅಕ್ರಮ ಎಸಗಿದ್ದಾರೆ ಆರೋಪಿಸಿ , ಕರ್ನಾಟಕ ಆಡಳಿತ ಸುಧಾರಣೆ ಆಯೋಗಕ್ಕೆ ದೂರು ನೀಡಿದೆ .

ಇಂದು ತಾಲೂಕಿಗೆ ಆಗಮಿಸಿದ್ದ ಸುಧಾರಣೆ ಕರ್ನಾಟಕ ಆಡಳಿತ ಆಯೋಗದ ತಂಡ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ್ದರು .

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಯುವ ಸೇನೆಯ ಜಿ.ಆರ್.ಶ್ರೀನಿವಾಸ್ ದೂರು ಸಲ್ಲಿಸಿ 2022-23 ಸಾಲಿನ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಅಡಿಯಲ್ಲಿ ತಾಲೂಕಿನಾದ್ಯಂತ 224 ಅರ್ಜಿಗಳು ಬಂದಿರುತ್ತದೆ ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಕೇವಲ 42 ಅರ್ಜಿಗಳನ್ನು ಮಾತ್ರ ಅಂಗಿಕರಿಸಿ ಉಳಿದ ಅರ್ಜಿಗಳನ್ನು ಉದ್ದೇಶ ಪೂರಕವಾಗಿ ತಿರಸ್ಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ .

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತ೦ದರೆ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕೃತವಾಗಿದೆ ಇವು ಪರಶೀಲನೆಯಲ್ಲಿದೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದ್ದರು . ಆದರೆ ಪುನ ಪರಿಶೀಲನೆಯಲ್ಲಿ ಅವರಿಗೆ ಬೇಕಾದ ಕೆಲವರ ಹೆಸರುಗಳನ್ನು ಸೇರಿಸಿದ್ದಾರೆ . ಈ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ ನಡೆದಿರುವುದಾಗಿ ದೂರಿದರು .

ಈ ಅಕ್ರಮಗಳಿಗೆ ಕಾರಣರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅನ್ಯಾಯಕ್ಕೆ ಒಳಗಾದ ದಲಿತ ಮಕ್ಕಳಿಗೆ ನ್ಯಾಯ ಒದಗಿಸಕೊಡಬೇಕು ಎಂದು ಒತ್ತಾಯಿಸಿದರು .