ಶ್ರೀನಿವಾಸಪುರ: “ಪರಿಸರ ಮಾಹಿತಿ ಕಾರ್ಯಕ್ರಮ”

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯ ಲಕ್ಷ್ಮೀಪುರ ವಲಯದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಫ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ.ಕೆ ವೆಂಕಟರವಣಪ್ಪ ವಹಿಸಿದ್ದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಗಿಡಗಳನ್ನು ನಾಟಿ ಮಾಡುವ ಜೊತೆಗೆಅವುಗಳ ಸಂರಕ್ಷಣೆ ಬಹಳ ಮುಖ್ಯ ನಮಗೆ ಉಸಿರಾಡಲು ಆಮ್ಲಜನಕ ಅವಶ್ಯಕತೆ ಇದೆ ಇವತ್ತು ನಾವು ಸಸಿಗಳನ್ನು ಬೆಳೆಸಿದರೆ ಮುಂದೆ ಒಂದು ದಿನ ಗಿಡ ಮರಗಳು ನಮ್ಮನ್ನು ಉಳಿಸುತ್ತದೆ ಎಂದು ತಿಳಿಸಿದರು.
ಉಪಸ್ಥಿತಿ:ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಜಗದೀಶ್ ಕುಮಾರ್ ಹಾಗೂ ಅಬ್ಬಣ್ಣ ಪತ್ರಕರ್ತರಾದ ವೆಂಕಟೇಶ್, ಒಕ್ಕೂಟದ ಅಧ್ಯಕ್ಷರಾದ ಪದ್ಮಮ್ಮ ಹಾಗೂ ಕೃಷಿ ಮೇಲ್ವಿಚಾರಕರಾದ ಅರುಣ್ ಕುಮಾರ್ ಹಾಗೂ ವಲಯದ ಮೇಲ್ವಿಚಾರಕರಾದ ಮಂಜುನಾಥ ಹಾಗೂ ಸೇವಾಪ್ರತಿನಿಧಿಗಳಾದ ರಾಮಸುಬ್ಬು, ಸುಜಾತ, ಇಮ್ರಾನ್ ಪಾಷ ಹಾಗೂ ಸಿ.ಎಸ್.ಸಿ ಗಿಐಇ ಔಠಿeಡಿಚಿಣoಡಿ ಮಹೇಂದ್ರಹಾಗೂಶಾಲೆಯ ಸಹ ಶಿಕ್ಷಕರು ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.