JANANUDI.COM NETWORK
ಕುಂದಾಪುರ,ಜೂ.5: ಕುಂದಾಪುರ ಚರ್ಚಿನ ಕಥೊಲಿಕ್ ಸಭಾ ಘಟಕದ ಮುಂದಾಳತ್ವದಲ್ಲಿ, ಸಿ.ಎಸ್.ಐ. ಕ್ರಪಾ ಚರ್ಚ್, ಮುಸ್ಲಿಂ ವೆಲ್ಪೇರ್ ಕಮಿಟಿ ಹೆಮ್ಮಾಡಿ, ಎನ್.ಎಂ.ಎ.ಕೋಡಿ ಇವರ ಆಶ್ರಯದಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಂಯ ಪ್ರೇರಿತ ರಕ್ತದಾನ ಶಿಬಿರ, ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಕಾರ್ಯಕ್ರಮ ನಡೆಯಿತು.
ಇದರ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇಯರ್ ಮೇನ್ ಜಯಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೊರೀದರು. ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕಾರ್ಯಕ್ರಕ್ಕೆ ಆಶಿರ್ವವಚನ ಮಾಡಿ ‘ಮಾನವನು ಮಾನವನಿಗೆ ಸಹಾಯ ಮಾಡುವುದು ಉತ್ತಮ ಮನುಷತ್ವದ ಉತ್ತಮ ಗುಣ, ತನ್ನ ರಕ್ತ ದಾನ ಮಾಡಿ ಇತರರ ಜೀವ ಉಳಿಸುವ ಕಾರ್ಯ ಮಹತ್ಕಾರ್ಯ” ಎಂದು ನುಡಿದರು.
ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ|ಆದರ್ಶ್ ಹೆಬ್ಬಾರ್, ಮುಸ್ಲಿಂ ವೆಲ್ಪೇರ್ ಕಮಿಟಿ ಹೆಮ್ಮಾಡಿಯ ಸಯ್ಯದ್ ಯಾಸಿನ್ ಇವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಕಥೊಲಿಕ್ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಕುಂದಾಪುರ ಸ್ತ್ರೀ ಆಯೋಗದ ಅಧ್ಯಕ್ಷೆ ವಿನಯಾ ಡಿಕೋಸ್ತಾ ಉಪಸ್ಥಿತರಿದ್ದರು, ಕುಂದಾಪುರ ಚರ್ಚಿನ ರಕ್ತದಾನಿಗಳು, ಮುಸ್ಲಿಂ ವೆಲ್ಪೇರ್ ಕಮಿಟಿ ಹೆಮ್ಮಾಡಿಯ ಸದಸ್ಯರು, ಧರ್ಮಗುರು ವಂ|ಡಿಲ್ಲಾನ್ ನೇತ್ರತ್ವದಲ್ಲಿ ಕುಂದಾಪುರ ಸಿ.ಎಸ್.ಐ. ಚರ್ಚ್ ಸದಸ್ಯರು ಹಾಗೂ ಮುನಾಫ್ ಕೋಡಿ ನೇತ್ರತ್ವದಲ್ಲಿ ಎನ್.ಎಂ.ಎ.ಕೋಡಿ ಕಮಿಟಿಯ ಸದಸ್ಯರು ರಕ್ತದಾನ ನೀಡಿದರು.
ಶಿಬಿರದ ಸಂಯೋಜಕಿ ಡಾ|ಸೋನಿ ಡಿಕೋಸ್ತಾ ಸ್ವಾಗತಿಸಿದರು. ಕಥೊಲಿಕ್ ಸಭಾ ಕುಂದಾಪುರ ಘಟಕದ ಎಲ್ಡ್ರಿನ್ ಡಿಸೋಜಾ ವಂದಿಸಿದರು.