ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ: “ಶಾಲಾ ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮ”

JANANUDI.COM NETWORK


ಕುಂದಾಪುರ: ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ, ಆರ್. ಡಿ. ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಹಾಗೂ ಪುನರ್ ನಿರ್ಮಾಣ, ಚಟುವಟಿಕೆಗಳ ಅಡಿಯಲ್ಲಿ” ಶಾಲಾ ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮ” ದಿನಾಂಕ 04-06-2022 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟಕರು ಹಾಗೂ ಕುಂದಾಪುರ ಜಲಸಿರಿ ಸಹಾಯಕ ಕಾರ್ಯಪಾಲಕ ಅಭಿಯಂತ ರವರು ಶ್ರೀ ಅರ್ಕೇಶ್ ಗೌಡ ಇವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಹರೀಶ್ ವಿ ಸಹಾಯಕ ಅಭಿಯಂತರರು ಮಾತನಾಡುತ್ತ ಕುಂದಾಪುರ ಪಟ್ಟಣದ ನಿರಂತರ ನೀರು (24×7) ಸರಬರಾಜು ಯೋಜನೆಯ ಹಿನ್ನೆಲೆ, ಉದ್ದೇಶ, ಅನುಷ್ಠಾನದ ವ್ಯವಸ್ಥೆ, ನಿರಂತರ ನೀರು ಸರಬರಾಜಿನಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಾಲತೇಶ್ ಎಂ ಎಚ್ ಸಮುದಾಯ ಅಭಿವೃದ್ಧಿ ಸಹಾಯಕರಾದ ಇವರು ಪಿಪಿಟಿ ಮೂಲಕ ಯೋಜನೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಯೋಜನೆಯ ಮಹತ್ವವನ್ನು ತಿಳಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಯೋಜನಾ ಅನುಷ್ಠಾನ ಘಟಕದ ಸಿಬ್ಬಂದಿ ವರ್ಗದವರಾದ ಸುಭಾಷ್ ಜಿ ಕಡಿಯಾಳ(FMIDC), ಆರತಿ(CF) ಮಂಜುಳಾ, ರಚನಾ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಮಿತಾ(PCS) ಇವರು ಸ್ವಾಗತಿಸಿದರು. ತಂಡದ ನಾಯಕಿ ಜ್ಯೋತಿ ಇವರು ವಂದಿಸಿದರು. ಅಧ್ಯಾಪಕ ಮೈಕಲ್ ಇವರು ಕಾರ್ಯಕ್ರಮ ನಿರೂಪಿಸಿದರು.