ಉಡುಪಿ ಧರ್ಮಪ್ರಾಂತ್ಯದ ಪಿ.ಆರ್.ಓ./ಉಜ್ವಾಡ್ ಪ್ರತ್ರಿಕೆಯ ಸ್ಥಾಪಕ ಸಂಪಾದಕ ಫಾ|ಚೇತನ್ ಲೋಬೊರವರಿಗೆ ಮಾಧ್ಯಮ ಮಿತ್ರರಿಂದ  ಬಿಳ್ಕೋಡುಗೆ 

JANANUDI.COM NETWORK


ಉಡುಪಿ: ಧರ್ಮಪ್ರಾಂತ್ಯದಲ್ಲಿ 9 ವರ್ಷಗಳ ಸೇವೆಯ ಕಾಲದಲ್ಲಿ ಉಜ್ವಾಡ್‌ ಪತ್ರಿಕೆಯ ಸಂಪಾದಕರಾಗಿ, ಸಾರ್ವಜನಿಕ.ಸಂಪರ್ಕಾಧಿಕಾರಿಯಾಗಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಈಗ ಉಡುಪಿ ಧರ್ಮಪ್ರಾಂತ್ಯದಿಂದ ನಿರ್ಗಮಿಸಿ ಮಂಗಳೂರು ಧರ್ಮಪ್ರಾಂತ್ಯದ ಖ್ಯಾತ ಅಸ್ಸಿಸಿ ಪ್ರೆಸ್‌ ಹಾಗೂ ಅಸ್ಸಿಸಿ ಸ್ಟುಡಿಯೋದ ನಿರ್ದೇಶಕ ಹಾಗೂ ‘ಸೆವಕ್‌’ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕರಾಗಿ ನಿಯುಕ್ತಿಗೊಂಡ ವಂ| ಧರ್ಮಗುರು ಚೇತನ್‌ ಲೋಬೊ.ಅವರ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಪತ್ರಕರ್ತರ ಪರವಾಗಿಏರ್ಪಡಿಸಿದ ಬಿಳ್ಳೋಡುಗೆ ಸಮಾರಂಭ ಸೋಮವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನೆರವೇರಿತು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜಿರಾಲ್ಡ್‌ ಐಸಾಕ್‌ ಲೋಬೊ ಅವರು ಮಾತನಾಡಿ ವಂ|ಫಾ|ಚೇತನ್‌ ಲೋಬೊ ಅವರು ಕಪುಚಿನ್‌ ಧಾರ್ಮಿಕಸಭೆಯ ಧರ್ಮಗುರುವಾಗಿದ್ದರೂ ಕೂಡ ತಮ್ಮ ಹೆಚ್ಚಿನ ಅವಧಿಯನ್ನು ಶಿವಮೊಗ್ಗ ಹಾಗೂ ಉಡುಪಿ ಧರ್ಮಪ್ರಾಂತ್ಯಗಳಲ್ಲಿಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯುನ್ನತ ಸೇವೆ ನೀಡಿದ್ದಾಗಿದ್ದು  ಅವರ ಸೇವೆ ವರ್ಣನಾತೀತ. ಅತೀ ಹೆಚ್ಚು ತಾಳ್ಮೆ ಹೊಂದಿದ ವ್ಯಕ್ತಿಯಾಗಿರುವ ವಂ| ಚೇತನ್‌ ಲೋಬೊ ಅವರು ತಮ್ಮ 9 ವರ್ಷಗಳ.ಸೇವೆಯಲ್ಲಿ ಧರ್ಮಪ್ರಾಂತ್ಯದ ಏಳಿಗೆಗೆ ನೀಡಿರುವ ಸೇವೆ ಅಪಾರವಾಗಿದ್ದು ಮುಂದೆಯೂ ಅವರ ಬಿಡುವಿನ ಅವಧಿಯಲ್ಲಿ ಉಡುಪಿ ಧರ್ಮಪ್ರಾಂತ್ಯ ಅವರ ಸೇವೆಯನ್ನು ಯುವಜನರ ಮತ್ತು ಮಕ್ಕಳಿಗೆ ಮಾಧ್ಯಮದ ತರಬೇತಿ. ವಿಚಾರದಲ್ಲಿ ಬಳಸಿಕೊಳ್ಳಲಾಗುವುದು ಎಂದರು.

    ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಂ[ಚೇತನ್‌ ಲೋಬೊ. ಅವರು ತಾನು ಪ್ರಥಮವಾಗಿ ಒರ್ವ ಕ್ರೈಸ್ತ ಧರ್ಮಗುರುವಾಗಿ ಗುರುತಿಸಲ್ಪಟ್ಟರೆ ಎರಡನೇಯದಾಗಿ ಒರ್ವ ಪತ್ರಕರ್ತನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದರು.

“ಪತ್ರಕರ್ತನಾಗಿರವವನು ಯಾವುದೇ ವ್ಯಕ್ತಿಯ ಅಡಿಯಾಳಾಗಿರದೆ ಸಮಾಜದ ಅಂಕು ಡೊಂಕುಗಳನ್ನು ನೇರವಾಗಿ ಪ್ರಶ್ನಿಸುವಂತರಿಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತು ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಮಾತ್ರ ಆತ ಒರ್ವ ನೈಜ್ಯ ಪತ್ರಕರ್ತನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ” ವಂ[ಚೇತನ್‌ ಲೋಬೊ

    ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ ಇದರ ರೆಕ್ಟರ್‌ ವಂ| ವಲೇರಿಯನ್‌ ಮೆಂಡೊನ್ಸಾ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್‌ ಶೆಟ್ಟಿ, ಧರ್ಮಪ್ರಾಂತ್ಯದ ಮಾಧ್ಯಮ ಸಮನ್ವಯಕಾರರಾದ ಮೈಕಲ್‌ ರೊಡ್ರಿಗಸ್‌, ಬಿಗ್‌ ಜೆ. ವಾಹಿನಿಯ ನಿರ್ದೇಶಕ ಪ್ರಶಾಂತ್‌ ಜತ್ತನ್ನ ಅವರು ಶುಭಹಾರೈಸಿದರು. ಹಿರಿಯ ಧರ್ಮಗುರು ವಂ| ವಿಲಿಯಂ ಮಾರ್ಟಿಸ್‌ ಮತ್ತು ಹಲವಾರು ಕ್ರೈಸ್ತ ಮಾಧ್ಯಮ ಮಿತ್ರರು  ಉಪಸ್ಥಿತರಿದ್ದರು. ಪತ್ರಕರ್ತ ಸ್ಟೀವನ್‌ ಕುಲಾಸೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.