ಶ್ರೀನಿವಾಸಪುರ 1 ಗ್ರಾಮಪಂಚಾಯಿತಿಯೊಂದಿಗೆ ಸ್ವಚ್ಚತೆ ಕಾಪಾಡಲು ಗ್ರಾಮಸ್ಥರು ಸಹಕಾರ ನೀಡಬೇಕು :ಜಿಲ್ಲಾಧಿಕಾರಿ ವೆಂಕಟರಾಜು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಗ್ರಾಮಪಂಚಾಯಿತಿಯೊಂದಿಗೆ ಸ್ವಚ್ಚತೆ ಕಾಪಾಡಲು ಗ್ರಾಮಸ್ಥರು ಸಹಕಾರ ನೀಡಬೇಕು. ಗ್ರಾಮದಲ್ಲಿ ಪ್ಲಾಸ್ಟಿಕ್ ಕವರ್‍ಗಳು ಹರಿಡಿದ್ದು , ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ 15ದಿನಗಳೊಗೆ ಮಾಡುವಂತೆ ಇಒ,ಪಿಡಿಒ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟರಾಜು ಸೂಚಿಸಿದರು.
ತಾಲೂಕಿನ ಯಲ್ದೂರು ಹೋಬಳಿಯ ನೆರ್ನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಶುಕ್ರವಾರ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ಸಮುದಾಯಭವನದಲ್ಲಿ ಅಂಗನವಾಡಿ ನಡೆಯುತ್ತಿರುವುದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿಗೆ ಬೇಟಿ ನೀಡಿ ಸಂಬಂದಪಟ್ಟ ಅಧಿಕಾರಿಗಳಿಗೆ ಅಂಗನಾಡಿ ಕೇಂದ್ರಕ್ಕೆ ಜಾಗವೊಂದನ್ನು ಪತ್ತೆ ಹಚ್ಚುವಂತೆ ಸೂಚಿಸಿ , ಮುಂದಿನ ವಾರದೊಳಗೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ರಸ್ತೆ ಇಲ್ಲದಿರುವ ಬಗ್ಗೆ ಮಹಿಳೆಯರು ಬೇಡಿಕೆ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜುಗಳಿಗೆ ವಿದ್ಯಾಥಿಗಳು ಕೆಎಸ್‍ಆರ್‍ಟಿಸಿ ಇಲಾಖೆಯ ಅಧಿಕಾರಿಗಳಿಗೆ ಮುಂದಿನ 15 ದಿನಗಳ ಒಳಗೆ ಗ್ರಾಮಕ್ಕೆ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡುವುದಾಗಿ ಹಾಗು ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮಕ್ಕೆ ಸಂಬಂದಿಸಿದಂತೆ ವಿದುವಾವೇತನ, ಅಂಗವಿಲಕಲ ವೇತನ, ಪಿಂಚಣಿ ಗೆ ಸಂಬಂದಿಸಿದ ಅರ್ಜಿಗಳನ್ನು ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು. ಕೆಲ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಬೇಡಿಕೆ ನೀಡಿದ್ದು ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಕೆರೆ ಒತ್ತುವರಿ ತೆರೆವು ಗೊಳಿಸಿ ಬೌಂಡರಿ ನಿರ್ಮಿಸುವಂತೆ , ಗ್ರಾಮದ ಸ್ಮಶಾನಕ್ಕೆ 15 ಲಕ್ಷ ರೂ ಬಿಡುಗಡೆ ಮಾಡಿಸುವಂತೆ ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದರು.
ಒಟ್ಟು 30 ಅರ್ಜಿಗಳು ಬಂದಿದ್ದು , ಇಲಾಖಾವರು ಅರ್ಜಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ , ಗ್ರಾಮಸ್ಥರ ಬಹುತೇಕ ಬೇಡಿಕೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಿದರು. ಉಳಿದ ಬೇಡಿಕೆಗಳನ್ನು ತ್ವರಿತವಾಗಿ ಈಡೆರಿಸುವುದಾಗಿ ಭರವಸೆ ನೀಡಿದರು .
ಈ ಕಾರ್ಯಕ್ರಮದಲ್ಲಿ ಇಲಾಖಾವಾರು ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಭೂ ದಾಖಲೆಗಳ ಉಪನಿರ್ದೇಶಕಿ ಭಾಗ್ಯಮ್ಮ, ಜಿಲ್ಲಾ ಆರೋಗ್ಯ ಅಧಿಕಾರಿ ಜಗದೀಶ್, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮುದ್ದಣ್ಣ, ಶಿಶು ಅಭಿವೃದ್ಧಿ ಉಪನಿರ್ದೇಶಕ ಮುನಿರಾಜು, ತಹಸೀಲ್ದಾರ್ ಶರೀನ್‍ತಾಜ್, ಇಒ ಎಸ್.ಆನಂದ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಬಿಇಒ ಉಮಾದೇವಿ, ಟಿಎಚ್‍ಓ ಎಂ.ಸಿ.ವಿಜಯಮ್ಮ, ಎಡಿಎಲ್‍ಆರ್ ಲಿಖಿತ, ಎಡಿಎಲ್‍ಆರ್ ಇಲಾಖೆಯ ಅದೀಕ್ಷಕ ನಟೇಶ್‍ಮೂರ್ತಿ.ವಿ, ಉಪತಹಸೀಲ್ದಾರ್ ಹರಿಪ್ರಸಾದ್, ಆರ್‍ಐ ಗಳಾದ ವಿನೋದ್‍ಕುಮಾರ್, ಅಂಬರೀಶ್, ಮುನಿರೆಡ್ಡಿ, ಗುರುರಾಜರಾವ್, ಜರ್ನಾಧನ್, ಹೋಬಳಿ ತೋಟಗಾರಿಕೆ ಅಧಿಕಾರಿ ಹರೀಶ್, ಸೋಮಾಯಜಲಪಲ್ಲಿ ಗ್ರಾ.ಪಂ. ಅಧ್ಯಕ್ಷೆ ವನಿತ, ಪಿಡಿಒ ಸುಬ್ರಮಣಿ , ಗ್ರಾಮಲೆಕ್ಕಾಧಿಕಾರಿಗಳಾದ ಹರಿಬಾಬು, ಮುರಳಿ, ಜಯಚಂದ್ರ, ಸಾಕಮ್ಮ, ಶಿವಾನಂದ ಇತರರು ಇದ್ದರು.