ಖ್ಯಾತ ಕೊಂಕಣಿ ಸಾಹಿತಿ, ಹಾಸ್ಯ ಬರಹಗಾರ ‘ಸಿಜಿಎಸ್ ತಾಕೊಡೆ ‘ ನಿಧನ

JANANUDI.COM NETWORK

ಮಂಗಳೂರು, ಮೇ 28: ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್  ತಾಕೊಡೆ’ ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ ಸಿಕ್ವೇರಾ ಮೇ 28 ರಂದು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಇವತ್ತಿನ ಕಾಲದಲ್ಲಿ ಕೊಂಕಣಿಯಲ್ಲಿ ಅಪ್ರತಿಮ ಹಾಸ್ಯ ಬರಹಗಾರರಾಗಿದ್ದರು.

‘ಸಿಜಿಎಸ್ ಅವರ ಹಾಸ್ಯ ಬರಹದಿಂದ ಕೊಂಕಣಿಯ ಜನರಿಗೆ ಚಿರಪರಿಚಿತರಾಗಿದ್ದರು. ಅವರು ಹಾಸ್ಯ ಬರಹದಲ್ಲಿ ನಯವಾಗಿ ಕಟು ಸತ್ಯವನ್ನು ಜನರ ಮುಂದಿಡಲು ಖ್ಯಾತರಾಗಿದ್ದರು.

ಅವರು ದಕ ಜಿಲ್ಲೆಯ  ತಾಕೊಡೆನಲ್ಲಿ ಜನಿಸಿದ ಸಿರಿಲ್ ತಮ್ಮ ಆರಂಭಿಕ ಶಿಕ್ಷಣವನ್ನು  ತಾಕೊಡೆ, ಮೂಡುಬಿದಿರೆ ಮತ್ತು ಬೆಂಗಳೂರಿನಲ್ಲಿ ಮಾಡಿದರು .ಸಿರಿಲ್ ಅವರು 12 ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅವರು ರಾಕ್ನೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ ‘ಕಾಣಿಕ್ ’ ಮತ್ತು ‘ಉಮಾಳೊ’ ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು. ಸಿಜೆಎಸ್‌ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದಿದ್ದಾರೆ. ಸಿಜಿಎಸ್ಸ್‌ ಅವರಿಗೆ ಕೊಂಕಣಿ ಬಾಷಾ ಮಂಡಲ್, ಗೋವಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂದೇಶ, ಡಾಯ್ಜಿ ದುಬೈ ಮತ್ತು ಕೊಂಕಣಿ ಕುಟಮ್ ಬಹ್ರೇನ್ ಪ್ರಶಸ್ತಿಗಳು ಲಭಿಸಿದ್ದು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆಸಿಜಿಎಸ್ ಅವರು ಪತ್ನಿ ಸಿಲ್ವಿಯಾ ಮತ್ತು ಮಕ್ಕಳಾದ ವಿಜೇಶ್ ಮತ್ತು ವಿಜೇತಾ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.