ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ; ಶಿಕ್ಷಕರು ಸೇರಿದ0ತೆ 10 ಆರೋಪಿಗಳ ಬ0ಧನ

JANANUDI.COM NETWORK

ರಾಮನಗರ: ರಾಜ್ಯದಲ್ಲಿ ಹಲವು ಆಕ್ರಮ ನೇಮಕಾತಿ ಹಗರಣಗಳ ಸಾಲು ಸಾಲು ನಡೆಯುತ್ತಾ ಇದ್ದು ಇದೀಗ ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬೆಳಕಿಗೆ ಬಂದು ಆರೋಪಿಗಳನ್ನು ಬಂದಿಸಲಾಗಿದೆ.


ಎಸ್ ಎಸ್ ಎಲ್ ಸಿ ಪರೀಕ್ಚೆಯ ಪ್ರಶ್ನೆ ಪತ್ರಿಕೆಗಳನ್ನ ಪರೀಕ್ಷೆ ಆರ0ಭಕ್ಕೂ ಮುನ್ನವೇ ವಾಟ್ಸಪ್ ಮೂಲಕ ಕಳುಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟು ಇದೀಗ ಶಿಕ್ಷಕರು ಸೇರಿದ0ತೆ ಹಲವರು ಇದೀಗ ಫೊಲೀಸರ ಅತಿಥಿಯಾಗಿದ್ದಾರೆ.


ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ0ಬ0ಧಿಸಿ ಮಾಗಡಿ ಫೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸ0ಬ0ಧ ರಾಮನಗರ ಜಿಲ್ಲೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಗಡಿ ಕೆ0ಪೇಗೌಡ ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ಶಿಕ್ಷಕರಾದ ಕೃಷ್ಣಮೂರ್ತಿ. ಅರ್ಜುನ್. ನಾಗರಾಜ್, ಅಲೀಂ, ಶ್ರೀನಿವಾಸ್. ಲೋಕೇಶ್ ಸುಬ್ರಕ್ಮಣ್ಯ. ಪತ್ರಕರ್ತ ವಿಜಯ್ ಬಂಧಿತ ಆರೋಪಿಗಳು.


ಪರೀಕ್ಷೆ ವೇಳೆ ಎಲ್ಲಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಪ್ರತಿದಿನ ಪರೀಕ್ಷೆ ಆರ0ಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್ ಮೂಲಕ ಸೋರಿಕೆ ಮಾಡಲಾಗುತ್ತಿತ್ತು. ನ0ತರ ಶಿಕ್ಷಕರಿಂದ ಪ್ರಶ್ನೆಗಳಿಗೆ ಉತ್ತರ ಬರೆಸಲಾಗುತ್ತಿತ್ತು. ಉತ್ತರಗಳನ್ನು ರಂಗೇಗೌಡನ ವಾಟ್ಸಾಪ್ನ ಮೂಲಕ ಕಳಿಸಲಾಗುತ್ತಿತ್ತು. ಬಳಿಕ ಉತ್ತರಗಳೊಂದಿಗೆ ಪರೀಕ್ಸಾ ಕೇ0ದ್ರಕ್ಕೆ ರಂಗೇಗೌಡ ಭೇಟಿ ನೀಡುತ್ತಿದ್ದರು.


ಪರೀಕ್ಷಾ ಕೇಂದ್ರಕ್ಕೆ ಹೋಗಿ ರಂಗೇಗೌಡ ಉತ್ತರ ಬರೆಸುತ್ತಿದ್ದರು. ಸಿಲಿಕಾನ್ ಸಿಟಿ ಬೆ0ಗಳೂರಿನ ಪಕ್ಕದಲ್ಲೇ ಇರುವ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ ತಿಂಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದು ಇದೀಗ ಫಲಿತಾ0ಶ ಕೂಡ ಬಂದಿದೆ. ಆದರೆ ಪರೀಕ್ಟೆಯಲ್ಲಿ ಬಾರಿ ಆಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.


ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆ0ಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎ0ಬಾತ, ಏಪ್ರಿಲ್ 11 ರಂದು ವಿಜ್ನಾನ ಪ್ರಶ್ನೆ ಪತ್ರಿಕೆಯನ್ನ, ಕೆ0ಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇರುವ ಎಚ್ ಎಮ್ ಮಾಗಡಿ ಟೌನ್ ಎ0 ವಾಟ್ಸ್ ಅಪ್ ಗ್ರೂಪ್ ಗೆ ಹರಿಬಿಟ್ಟಿದ್ದ. ಈ ವಿಚಾರ ಗೊತ್ತಿದ್ದರು ಕೆಲವರು ಸುಮ್ಮನೇ ಇದ್ದರು. ಆದರೆ ಈ ವಿಚಾರವಾಗಿ ಡಿಡಿಪಿಐ ಗ0ಗಣ್ಣಸ್ವಾಮಿ ಎ0ಬುವವರು ಮಾಗಡಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬ0ಧ ಫೊಲೀಸರು ಕ್ಲರ್ಕ್ ರಂಗೇಗೌಡ ಎ0ಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿತ್ತು.


ಕೇವಲ ಒ0ದು ಪತ್ರಿಕೆಯನ್ನು ಮಾತ್ರವಲ್ಲದೇ ಎಲ್ಲ ಪ್ರಶ್ನೆ ಪತ್ರಿಕೆಗಳನ್ನ ಸೋರಿಕೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತಿದ್ದನು. ಮಾಗಡಿ ಕೆ0ಪೇಗೌಡ ಪ್ರೌಢಶಾಲೆಯ ಗುಮಾಸ್ತ ರ0ಗೇಗೌಡ, ರ0ಗನಾಥ ಪ್ರೌಢಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಜೊತೆ ಸೇರಿ ರಂಗನಾಥ ಪ್ರೌಢಶಾಲೆಯ ಪರೀಕ್ಷಾ ಕೇ0ದ್ರದಿ0ದ ಬೆಳಗ್ಗೆ 10.15 ರ ಸುಮಾರಿಗೆ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಫೋಟೋ  ತೆಗೆದು ಕೃಷ್ಣಮೂರ್ತಿ ರ0ಗೇಗೌಡನಿಗೆ ಕಳುಹಿಸುತ್ತಿದ್ದ. ಅದನ್ನ ರಂಗೇಗೌಡ ಇತರೇ ವಿಷಯ ಪರಿಣಿತರಿಗೆ ಪರೀಕ್ಷೆ ದಿನದಂದು ಕಳುಹಿಸಿ ಉತ್ತರವನ್ನ ವಾಟ್ಸ್ ಮೂಲಕ ತರುಹಿಸಿಕೊಳ್ಳುತ್ತಿದ್ದ. ಅದನ್ನ ಇತರೇ ಶಿಕ್ಷಕರಿಗೆ ನೀಡಿi ಪರೀಕ್ಷಾ ಕೇಂದ್ರದಲ್ಲಿ ಇದ್ದ ಮಕ್ಕಳಿಗೆ ಕೇಳಿಕೊಡುತ್ತಿದ್ದ. ಈ ಮೂಲಕ ಶಾಲೆಗೆ ಹೆಚ್ಚು ಫಲಿತಾ0ಶ ಬರುವಂತೆ ನೋಡಿಕೊಳ್ಳುತ್ತಿದ್ದ. ಈ ಪ್ರಕಾರ ಒಟ್ಟು ಆರು ಪರೀಕ್ಷೆಗಳಲ್ಲೂ ಇದೇ ರೀತಿ ಆಕ್ರಮ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ.


ಇದೇ ಪ್ರಕರಣಕ್ಕೆ ಸ0ಬ0ಧಪಟ್ಟಂತೆ ಕೆ0ಪೇಗೌಡ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ವಿಷಯ ಪರಿಣಿತರಾದ ಅರ್ಜುನ್, ನಾಗರಾಜ್, ಅಲೀಂ, ಶ್ರೀನಿವಾಸ್, ಸುಬ್ರಮಣ್ಯ, ಸೇರಿದ0ತೆ ಈ ಮೊದಲು ಆಕ್ರಮದ ಬಗ್ಗೆ ಗೊತ್ತಿದ್ದರೂ ಡೀಲ್ ಮಾಡಿಕೊಂಡು ಸುಮ್ಮನೆ ಇದ್ದ ಶಿಕ್ಷಕ ಲೋಕೇಶ್ ಹಾಗೂ ಖಾಸಗಿ ಪತ್ರಿಕೆ ವರದಿಗಾರ ವಿಜಯ್ ಇವರನ್ನು ಬ0ಧಿಸಿ ವಿಚಾರಣೆ ಮುಂದುವರೆಸಿದ್ದಾರೆ.