ಶ್ರೀನಿವಾಸಪುರ: ಸಾಧನೆ ಮಾತನಾಡಬೇಕೇ ಹೊರತು, ಮಾತನಾಡುವುದೇ ಸಾಧನೆ ಆಗಬಾರದು:ಎನ್.ಬಿ. ಗೋಪಾಲಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಾಧನೆ ಮಾತನಾಡಬೇಕೇ ಹೊರತು, ಮಾತನಾಡುವುದೇ ಸಾಧನೆಆಗಬಾರದುಎಂದುಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿದಾಕಲಾತಿಯನ್ನು ಹೆಚ್ಚಿಸಿಕೊಂಡು ಹಗಲಿರುಳೂ ಶ್ರಮಿಸಿ ಪ್ರಮಾಣಿಕತೆಕರ್ತವ್ಯವನ್ನು ಮಾಡುತ್ತಿರುವಶಿಕ್ಷಕರ ಸೇವೆ ಶ್ಲಾಘನೀಯವಾಗಿದೆಎಂದು ಕ.ಸಾ.ಪ. ಜಿಲ್ಲಾಧ್ಯಕ್ಷಎನ್.ಬಿ. ಗೋಪಾಲಗೌಡ ತಿಳಿಸಿದರು.
ಪಟ್ಟಣದ ತ್ಯಾಗರಾಜ ಬಡಾವಣೆಯಕರ್ನಾಟಕ ಮಾದರಿ ಹಿರಿಯಪ್ರ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರ ದಿಯಾಗಿಈ ಶಾಲೆಯಸಮಸ್ಥ ಶಿಕ್ಷಕರಿಗೆ ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದಅಭಿನಂದನಾ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷಗೋಪಾಲಗೌಡ, ಈ ಶಾಲೆಯದಾಖಲಾತಿಯ ಸಂಖ್ಯೆ ಹೆಚ್ಚಾಗಿದ್ದು, ಜನಪ್ರತಿನಿದಿಗಳು ದಾಖಲಾತಿಗೋಸ್ಕರದೂರವಾಣಿ ಕರೆಗಳನ್ನು ಮಾಡಿ ಶಿಫಾರಸ್ಸು ಮಾಡುವ ಮಟ್ಟಕ್ಕೆಇಂದು ಈ ಮಾದರಿ ಶಾಲೆಯ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕಅಡಿಪಾಯ ಗಟ್ಟಿಗೊಳಿಸುವುದರಲ್ಲಿ ಸಮಸ್ಥ ಶಿಕ್ಷಕರು ತಮ್ಮಕರ್ತವ್ಯವನ್ನು ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿದ್ದಾರೆಎಂಬುದಕ್ಕೆ ಹೆಚ್ಚಾಗಿರುವದಾಖಲಾತಿಯೆ ಸಾಕ್ಷಿಯಾಗಿದೆ. ಈ ಶಾಲೆ ಉತ್ತಮ ಪರಿಸರ ಹೊಂದಿದ್ದು, ಇಲ್ಲಿನ ಶಿಕ್ಷಣ ಗುಣಾತ್ಮಕವಾಗಿದ್ದು, ರಾಜ್ಯ ಮಟ್ಟಕ್ಕೆ ಸಂಚಲನವಾಗಿರುವುದುಅಭಿನಂದನಾರ್ಹ ವಿಷಯವಾಗಿದೆಎಂದರು.
ಜೀವಿಸುವುದಕ್ಕೆ ಸಂಪಾದಿಸಬೇಕೇ ಹೊರತು ಸಂಪಾದನೆಯೆಜೀವನಆಗಬಾರದು ಎಂಬ ನಾಡು ನುಡಿಯಂತೆಇಂದು ಖಾಸಗಿ ಶಾಲೆಗಳೂ ಸಹ ಮಾನವೀಯತೆಯದೃಷ್ಟಿಯಿಂದ ಬಡ ವಿದ್ಯಾರ್ಥಿಗಳಿಗೆ ತಮ್ಮಕೈಲಾದಷ್ಟು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ. ಸರ್ಕಾರಿ ಶಾಲೆಗಳೂ ಸಹ ಇಂದುಉತ್ತಮ ಸೇವೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಈ ಮಾದರಿ ಶಾಲೆ ದಾರಿ ದೀಪವಾಗಿದ್ದು, ಇಲ್ಲಿನ ಶಿಕ್ಷಕರು ಮುಖ್ಯೋಪಾಧ್ಯಯರ ಸೇವೆ ಅನನ್ಯವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಕೀರ್ತಿತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಹಾಗೆಯೇಇತರೆ ಶಾಲೆಗಳು ಈ ಶಾಲೆಯಂತೆ ಮಾದರಿಯಾಗಬೇಕೆಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಬೈರೇಗೌಡ ಮಾತನಾಡಿ, ಈಗ ಶಾಲೆಯಲ್ಲಿಒಬ್ಬ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಲುತುಂಬಾ ಒತ್ತಡಗಳ ಮದ್ಯೆ ಕೆಲಸ ಮಾಡಬೇಕಾಗಿದೆ, ಮೂಲ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ,ಒಂದೆ ದಿನ 50 ಕ್ಕಿಂತಲೂ ಹೆಚ್ಚು ದಾಖಲಾತಿಆಗಿರುವುದು ಹೆಮ್ಮೆಯ ವಿಷಯ, ಕೆಲಸ ಮಾಡಲು ನಮ್ಮ ಶಿಕ್ಷಕ ತಂಡ ನಿಷ್ಟೆಯಿಂದ 8 ಗಂಟೆಗಳ ಕಾಲ ಪಾಠಪ್ರವಚನಗಳನ್ನು ನಲಿ ಕಲಿ, ಕ್ರೀಡೆ, ಇತರೆಎಲ್ಲಾಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇರುವ ಶಾಲೆ ಕೊಠಡಿಗಳು ಸಾಕಾಗುತ್ತಿಲ್ಲ, ಶಿಕ್ಷಕರ ಕೊರತೆ ಹೆಚ್ಚಾಗಿದೆ, ಶಿಕ್ಷಣ ಇಲಾಖೆಯ ಸಹಕಾರಕಡಿಮೆಯಾಗಿದೆ. ಈ ಶಾಲೆಗೆ ಈ ವರ್ಷಕ್ಕೆ 99 ವರ್ಷಗಳು ಪೂರ್ಣವಾಗಿದೆ. ಮುಂದಿನ ಜೂನ್ 6, 2023ಕ್ಕೆ 100 ವರ್ಷಗಳು ತುಂಬಲಿದೆ. ಇಲ್ಲಿರುವ ಸಮಸ್ಯೆಗಳಿಗೆ ನಿರ್ವಹಣೆ ಮಾಡಲು ಸಮಸ್ಯೆಯಾಗಿ ಶಾಸಕರಲ್ಲಿಯೂ ಸಹ ವರ್ಗಾವಣೆಗೆ ಬಯಸಿರುವ ಉದಾಹರಣೆಯೂಆಗಿದೆ. ನಮ್ಮ ಶಿಕ್ಷಕರ ತಂಡ ಕೆಲಸ ಮಾಡಲುದೃಡವಾಗಿದ್ದೇವೆ. ನಮಗೆ ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ, ಜನಪ್ರತಿನಿದಿಗಳು, ಪೆÇೀಷಕರ ಸಹಕಾರ ಬಹಳ ಅಗತ್ಯವಿದೆಎಂದುತಮ್ಮ ನೋವನ್ನು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಕ.ಸಾ.ಪ. ಅಧ್ಯಕ್ಷಣಿ ಮಂಜುಳ ಮಾತನಾಡಿದರು. ಎಲ್ಲ ಶಿಕ್ಷಕರಿಗೆ ಕ.ಸಾ.ಪ.ತಾಲ್ಲೂಕುಘಟಕ ಮತ್ತು ಹಳೆಯ ವಿದ್ಯಾರ್ಥಿಗಳ ಬಳಗದಿಂದ ಗೌರವಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕ.ಸಾ.ಪ. ತಾಲ್ಲೂಕು ಗೌ. ಅಧ್ಯಕ್ಷ ಲಕ್ಷ್ಮಣ್‍ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ಬೈರೆಡ್ಡಿ, ಸಿ.ಆರ್.ಸಿ. ರಾಧಾ ಕೃಷ್ಣ, ಕ.ಸಾಪ. ಪದಾಧಿಕಾರಿಗಳಾದ ಚಂದ್ರಪ್ಪ, ಶಿವರಾಮೇಗೌಡ, ಶಂಕರೇಗೌಡ, ಮಧುಸೂದನ್, ಹಳೆ ವಿದ್ಯಾರ್ಥಿಗಳಾದ ಆನಂದ್, ಪ್ರಸನ್ನ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.