ಕೋಲಾರ “ವಿಶ್ವ ಜೇನುನೋಣ ದಿನ”

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ: ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರ, ಆತ್ಮ ಯೋಜನೆ, ಕೃಷಿ ಇಲಾಖೆ, ಕೋಲಾರ, ತೋಟಗಾರಿಕೆ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 20.05.2022 ರಂದು “ವಿಶ್ವ ಜೇನುನೋಣ ದಿನ”ಯನ್ನು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಶ್ವಥಾನಾರಾಯಣರೆಡ್ಡಿ, ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ), ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರರವರು ಮಾತನಾಡಿ ಜೇನಿನ ಮಹತ್ವ, ಅವುಗಳ ಸಂರಕ್ಷಣೆ, ವಿವಿಧ ರೀತಿಯ ಜೇನು ನೊಣಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಅರಣ್ಯಗಳ ಪುನಶ್ಚೇತನದಲ್ಲೂ ಕೂಡ ಜೇನು ನೊಣಗಳ ಪಾತ್ರವಿದೆ. ಜೇನುನೊಣಗಳ ಪರಾಗಸ್ಪರ್ಶ ಕ್ರೀಯೆಯಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಶೇಕಡ 40 ರಷ್ಟು ಅಧಿಕ ಇಳುವರಿ ಪಡೆಯಬಹುದೆಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ. ಹೆಚ್.ಎನ್. ಮಂಜುನಾಥರವರು ಮಾತನಾಡಿ ಇಲಾಖೆಯ ಸೌಲಭ್ಯಗಳಾದ ಮಧುವನ ಮತ್ತು ಜೇನುಕೃಷಿಯ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.
ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಕೋಲಾರವರು ಜೇನಿನ ಸಾಕಾಣಿಕೆಯಿಂದ ಆರ್ಥಿಕವಾಗಿ ಪ್ರಬಲರಾಗಬಹುದಾದ ಅಂಶಗಳ ಕುರಿತು ಮತ್ತು ಮೌಲ್ಯವರ್ಧನೆಯ ಬಗ್ಗೆ ತಿಳಿಸಿದರು.
ಪ್ರಗತಿಪರ ರೈತರಾದ ನೆನಮನಹಳ್ಳಿ ಶ್ರೀ. ಚಂದ್ರಶೇಖರ್‍ರವರು ಜೇನು ನೋಣದ ವಿವಿಧ ಉಪಯೋಗಗಳ ಮತ್ತು ಜೇನಿನಿಂದಾಗುವ ಆರೋಗ್ಯದ ಲಾಭಗಳನ್ನು ತಿಳಿಸಿದರು.
ಡಾ. ಅಂಬಿಕಾ ಡಿ.ಎಸ್, ಸಸ್ಯ ಸಂರಕ್ಷಣೆ, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಇವರ ಪ್ರಾಸ್ತವಿಕ ನುಡಿಯಲ್ಲಿ ವಿಶ್ವ ಜೇನು ದಿನಾಚರಣೆಯ ಮತ್ತು ಜೇನುನೊಣಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ಸುಮಾರು 60,000 ರೈತರು ಜೆನುಕೃಷಿಯಲ್ಲಿ ಪಾಲ್ಗೊಂಡಿದ್ದು, ಸುಮಾರು 2000 ರಿಂದ 2500 ಟನ್ ಜೇನು ಉತ್ಪಾದನೆಯಾಗುತ್ತಿದೆ. ಜೇನುನೋಣಗಳ ಸಂಖ್ಯೆ ಕ್ಷೀಣಿಸಲು ಹಲವಾರು ಕಾರಣಗಳಿದ್ದು, ಪ್ರಮುಖವಾಗಿ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯಾಗಿ ಮಾರ್ಪಾಟ ಮಾಡುವುದು, ಬೆಳೆಗಳಿಗೆ ಬರುವ ಕೀಟ ಪೀಡೆಗಳ ನಿರ್ವಹಣೆಗೆ ನಾವು ಮಾಡುವ ಸಿಂಪರಣೆಗಳು ಹಾಗೂ ಕೈಗಾರೀಕರಣದಿಂದ ಜೇನು ನೋಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಇವುಗಳ ಸಂಖ್ಯೆ ಮತ್ತೇ ಹಚ್ಚಾಗಬೇಕೆಂದರೆ ಸಮಗ್ರ ಕೃಷಿ ಪದ್ಧತಿಗಳು, ಪರಿಸರ ಸ್ನೇಹಿ ಪದ್ಧತಿಗಳಿಂದ ಕೀಟ ಮತ್ತು ರೋಗಗಳನ್ನು ನಿರ್ವಹಣೆ ಮಾಡುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು. ಜೇನು ಕೃಷಿಯ ಅಗತ್ಯ, ಪರಿಸರಕ್ಕೆ ಇವುಗಳಿಂದ ಆಗುವ ಅನೂಕೂಲತೆಗಳು, ಕೃಷಿ ಮತ್ತು ತೋಟಗಾರಿಎಕೆ ಬೆಳೆಗಳಿಗೆ ಜೇನು ನೋಣಗಳಿಂದ ಆಗುವ ಉಪಯೋಗಗಳು, ಜೇನು ಕೃಷಿ ಮಾಡಲು ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳು ಹಾಗೂ ವೈಜ್ಞಾನಿಕವಾಗಿ ಜೇನು ಕೃಷಿಯನ್ನು ಯಾವ ರೀತಿ ಮಾಡಬೇಕೆಂದು ಎಂದು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಜೊತೆಗೆ ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳನ್ನು ಮತ್ತು ರೈತಭಾಂದವರನ್ನು ಸ್ವಾಗತಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಡಾ. ಜ್ಯೋತಿ ಕಟ್ಟೆಗೌಡರ, ವಿಜ್ಞಾನಿ (ತೋಟಗಾರಿಕೆ), ಆತ್ಮ ಯೋಜನೆಯ ಶ್ರೀಮತಿ ಲಕ್ಷ್ಮೀ ಮತ್ತು 40 ಕ್ಕೂ ಹೆಚ್ಚು ಆಸಕ್ತ ರೈತರು ಪಾಲ್ಗೊಂಡಿದ್ದರು.