ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ 5 ವರ್ಷಗಳಿಂದ 100% ಫಲಿತಾಂಶ ದಾಖಲಿಸಿದೆ

JANANUDI.COM NETWORK

ರಾಜ್ಯ ಮಟ್ಟದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು


ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 5ನೇ ವರ್ಷವೂ ಕೂಡ 100% ಫಲಿತಾಂಶ ದಾಖಲಿಸಿದ್ದು 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿನಿ ನಿಶಾಲ್ ಮೊಂತೆರೊ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಾಕ್ಕೆ 11ನೇ ಸ್ಥಾನವನ್ನು ಗಳಿಸಿದ್ದಾರೆ. ನೇಹಾ ನೆಲ್ರಿಯಾ ಕೋತಾ 613 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಾಕ್ಕೆ 12ನೇ ಸ್ಥಾನವನ್ನು ಗಳಿಸಿದ್ದಾರೆ. ರಿಶಿಕಾ ಮೊಂತೆರೊ 609 ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಹಾಗೂ ರಾಜ್ಯಾಕ್ಕೆ 17ನೇ ಸ್ಥಾನವನ್ನು ಪಡೆದಿದ್ದಾರೆ. ಧಾರಿಣಿ ಕೆ.ಎಸ್ 606 ಅಂಕ ಗಳಿಸಿ ಶಾಲೆಗೆ ನಾಲ್ಕನೇ ಸ್ಥಾನ ಹಾಗೂ ರಾಜ್ಯಾಕ್ಕೆ 20ನೇ ಸ್ಥಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರದಾನ ಧರ್ಮ ಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿಸೋಜ ಎ ಸಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
ಶಾಲಾ ಫಲಿತಾಂಶದ ಗುಣಮಟ್ಟ ಎ ಗ್ರೇಡ್ ಆಗಿದ್ದು, ಗಣಿತ ವಿಷಯದಲ್ಲಿ ಇಬ್ಬರು ರಿಶಿಕಾ ಮೊಂತೆರೊ ಮತ್ತು ನೇಹಾ ನೆಲ್ರಿಯ ಕೋತಾ, ಸಮಾಜ ವಿಜ್ಞಾನ ವಿಷಯದಲ್ಲಿಐವರು ಧಾರಿಣಿ ಕೆ.ಎಸ್, ನಮೃತಾ ಕೆ, ನೇಹಾ ನೆಲ್ರಿಯ ಕೋತಾ, ನಿಶಾಲ್ ಮೊಂತೆರೊ ಮತ್ತು ರಿಶಿಕಾ ಮೊಂತೆರೊ, ಹಿಂದಿ ವಿಷಯದಲ್ಲಿ ನಾಲ್ವರು ನಂದಿತಾ ಆಚಾರ್ಯ, ನಿಶಾಲ್ ಮೊಂತೆರೊ, ಧಾರಿಣಿ ಮತ್ತು ಕೆ.ಎಸ್, ಪ್ರೀತೇಶ್ ಡಿಸೋಜಾ ಇವರು ನೂರರಲ್ಲಿ ನೂರು ಅಂಕ ಗಳಿಸಿದ್ದಾರೆ.

ವಿಶಿಷ್ಟ ಶ್ರೇಣಿ  ಮತ್ತು ಪ್ರಥಮ ದರ್ಜೆಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳು