ಅನ್ನ ನೀಡುವ ರೈತ ಸುಭೀಕ್ಷವಾಗಿದ್ದರೆ, ದೇಶದಲ್ಲಿನ ನಾವೆಲ್ಲರೂ ಸುಭೀಕ್ಷವಾಗಿರಲು ಸಾಧ್ಯ : ಜಿ.ಕೆ.ವೆಂಕಟಶಿವಾರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅನ್ನ ನೀಡುವ ರೈತ ಸುಭೀಕ್ಷವಾಗಿದ್ದರೆ, ದೇಶದಲ್ಲಿನ ನಾವೆಲ್ಲರೂ ಸುಭೀಕ್ಷವಾಗಿರಲು ಸಾಧ್ಯ ಎಂದು ಜೆಡಿಎಸ್‍ನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ವೆಂಕಟಶಿವಾರೆಡ್ಡಿ ಕಳೆದ ಒಂದು ವಾರದಿಂದ ಪ್ರಕೃತಿಯ ವಿಕೋಪಕ್ಕೆ ಜಿಲ್ಲೆಯಾದ್ಯಾಂತ ಹಾಗೂ ತಾಲೂಕಿನಾದ್ಯಾಂತ ಸುರಿದ ಭೀಕರವಾದ ಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಮಾವಿನ ಮರಗಳಲ್ಲಿನ ಪಕ್ವಕ್ಕೆ ಬಂದತಹ ಕಾಯಿಗಳು ಉದಿರು ಹೋಗಿವೆ 40 ವರ್ಷಗಳಿಂದ ಈ ರೀತಿಯಾದ ಗಾಳಿ ಬಂದಿಲ್ಲ ಇದರಿಂದ ಟಮಟೋ, ಕೋಸ್, ಕ್ಯಾಪ್ಸಿಕಾಮ್ ಇತರೆ ಬೆಳೆಗಳು ನಾಶವಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹಾಗಿದೆ ಈ ಹಿನ್ನೆಲೆಯಲ್ಲಿ ರೈತ ತುಂಬಾರಾದ ನಷ್ಟವನ್ನು ಅನುಭವಿಸುತ್ತಿದ್ದಾನೆ. ಶೀಘ್ರೇವೆ ಸರ್ಕಾರ ಅಧಿಕಾರಿಗಳ ತಂಡವನ್ನು ಕಳುಹಿಸಿ ಪರಿಶೀಲನೆ ಮಾಡಿ ಪರಿಹರವನ್ನು ಒದಗಿಸಬೇಕೆಂದರು.
ನಾನು ಸಹ ತಾಲೂಕಿನಾದ್ಯಾಂತ ಕೆಲ ತೋಟಗಳಿಗೆ ಬೇಟಿ ನೀಡಿ, ಫಸಲು ನೆಲಕ್ಕಚ್ಚಿರುವುದರ ಬಗ್ಗೆ ವೀಕ್ಷಿಸಿದ್ದೇನೆ. ಮಂಗಳವಾರ ಮುಳಬಾಗಿಲುನಲ್ಲಿ ನಡೆದ ಜನತಾ ಜಲದಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಗಮನಕ್ಕೆ ತಂದಿದ್ದೇನೆ. ಈ ವಿಚಾರದ ಬಗ್ಗೆ ಸಭೆಯಲ್ಲಿ ಮಾತನಾಡುತ್ತಾ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ 25 ಕೋಟಿಯಷ್ಟು ಸಾಲಮನ್ನ ಮಾಡಿದ್ದೇನೆ. ಹಾಗೂ ಬೆಳೆ ನಷ್ಟ ಪರಿಹಾರಗಳನ್ನು ನೀಡಿದ್ದೇನೆ. ಎಂದು ಸಭೆಯಲ್ಲಿ ತಿಳಿಸಿದರು.
ನಿನ್ನೆ ಉಸ್ತವಾರಿ ಸಚಿವರು ಮುನಿರತ್ನ ರವರು ತಾಲ್ಲೂಕಿಗೆ ಬೇಟಿ ನೀಡಿದ ಸಂದರ್ಭದಲ್ಲಿ ದೂರವಾಣಿ ಮುಖಾಂತರ ಸಚಿವರನ್ನು ಮಾತನಾಡಿದ್ದೆ, ಸಚಿವರು ಸಹ ನಷ್ಟ ಪರಿಹಾರವನ್ನು ಒದಗಿಸುವರದ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತೇನೆ ಅತಿ ಶೀಘ್ರವಾಗಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ದೂರವಾಣಿ ಮುಖಾಂತರ ತಹಶೀಲ್ದಾರ್ ತೋಟಗಾರಿಕೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಜಿಲ್ಲೆಯಾದ್ಯಾಂತ ಬೆಳೆ ನಷ್ಟ ಪರಿಹಾರದ ಅಂಗವಾಗಿ ತೋಟಗಾರಿಕೆ ಇಲಾಖೆಯೊಂದಿಗೆ ಇತರೆ ಅಧಿಕಾರಿಗಳನ್ನು ಕ್ಷೇತ್ರಗಳಿಗೆ ಕಳುಹಿಸಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಅತಿ ಶೀಘ್ರವಾಗಿ ವರದಿಯನ್ನು ಸಲ್ಲಿಸಿ ಪರಿಹಾರವನ್ನು ಒದಗಿಸುವುದಕ್ಕೆ ಚುರಕಾಗಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ತಿಳಿಸಿದರು.
ಸರ್ಕಾರವು ರೈತರಿಗೆ ಅತಿ ಶೀಘ್ರವಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು.ಇಲ್ಲಾವದರೆ ನಮ್ಮ ಜೆಡಿಎಸ್ ಪಕ್ಷದ ವತಿಯಿಂದ ರಸ್ತೆಗೆ ಇಳಿದು ತೀವ್ರ ರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಗೊಷ್ಠಿಯಲ್ಲಿ ಪುರಸಭೆ ಸದಸ್ಯ ಅಪ್ಪೋರಾಳ್ಳ ರಾಜು,ಜಿ.ಪಂ.ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ಮುಖಂಡರಾದ ಪೂಲು ಶಿವಾರೆಡ್ಡಿ, ಅಂಬೇಡ್ಕರ್ ಪಾಳ್ಯ ರವಿ, ಈರುಳ್ಳಿರಂಗಪ್ಪ, ಯುವಮುಖಂಡ ಮನುಮಹೇಶ್ ಇನ್ನೀತರರು ಹಾಜರಿದ್ದರು.