ನವಜಾತ ಶಿಶುಗಳಿಗಾಗಿ ಹಾಗೂ ತಾಯಂದಿರಿಗಾಗಿ ವಿಶೇಷ ನಿದ್ರಾಸನ ಕಲ್ಪಿಸಿದ ಭಾರತೀಯ ರೈಲ್ವೆ

JANANUDI.COM NETWORK

ಹೊಸದಿಲ್ಲಿ:ಭಾರತೀಯ ರೈಲ್ವೆ ಇಲಾಖೆಯು ತಾಯಂದಿರ ದಿನದ ವಿಶೇಷದ ಅಂಗವಾಗಿ ರೈಲುಗಳಲ್ಲಿ ಪ್ರತ್ಯೇಕ ಬೇಬಿ ಬರ್ತ್‌ (ನವಜಾತ ಶಿಶುಗಳಆಸನ)ಗಳನ್ನು ಪರಿಚಯಿಸಿದೆ.ಇದರಲ್ಲಿ ಶಿಶುಗಳು ತಮ್ಮ ತಾಯಂದಿರೊಂದಿಗೆ ಮಲಗಲು ಸಾಧ್ಯವಾಗುತ್ತದೆ.   ಮಹಿಳೆಯರಿಗೆ೦ದು ಮೀಸಲಿಟ್ಟ ಲೋವರ್‌ ಬರ್ತ್‌ಗಳನ್ನು ಬೇಬಿ ಬರ್ತ್‌ಗಳ ಪಕ್ಕದಲ್ಲಿಯೇ ಇರಿಸಲಾಗಿದೆ. ಇದರಿ೦ದಾಗಿ ಪುಟ್ಟಕ೦ದಮ್ಮಗಳು ಯಾವುದೇ ಅಡಚಣೆಯಿಲ್ಲದೇ ತಮ್ಮ ತಾಯೊಂದಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಾಯೋಗಿಕ ಹಂತವಾಗಿಕೆಲವು ರೈಲುಗಳಲ್ಲಿ ಮಾತ್ರ ಈ ಹೊಸ ವ್ಯವಸ್ಥೆಯನ್ನು ನೀಡಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಶಿಶುಗಳನ್ನು ಸುರಕ್ಷಿತವಾಗಿರಿಸಲು ಮತ್ತು ತಾಯಂದಿರಿಗೆ ಉತ್ತಮ ನಿದ್ರೆ ಪಡೆಯಲು ಸಾಕಷ್ಟು ಸ್ಥಳಾವಕಾಶವನ್ನು ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆಯು ಲಕ್ನೋ ಮೇಲ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ‘ಬೇಬಿ ಬರ್ತ್’ ಇದು ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಕಲ್ಪನೆಯಾಗಿದ್ದು ಇದೀಗ ಒಂದು ರೈಲಲ್ಲಿ ಪ್ರಾಯೋಗಿಕ ಹಂತವಾಗಿ ರೂಪುಗೊಂಡಿದೆ.