ಕನ್ನಡಕುದ್ರುವಿನಲ್ಲಿ ಸಂತ ಜೋಸೆಫ್ ವಾಜ್ ಚಾಪೆಲಿನ ರಜತ ಮಹೋತ್ಸವ

JANANUDI.COM NETWORK

ಕುಂದಾಪುರ, 05 ಮೇ 2022 ರಂದು ಗಂಗೊಳ್ಳಿ ಚರ್ಚ್ ಅಧಿನದಲ್ಲಿರುವ ಕನ್ನಡಕುದ್ರುವಿನ ಸಂತ ಜೋಸೆಫ್ ವಾಜ್ ಛಾಪೆಲ್ ಸ್ಥಾಪನೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ, ಛಾಪೆಲಿನ ರಜತ ಮಹೋತ್ಸವವನ್ನು ಆಚರಿಸಲಾಯಿತು.
ಈ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ| ಡಾ.ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ| ಡಾ.ಹೆನ್ರಿ ಡಿಸೋಜಾ ಅವರನ್ನು ಕನ್ನಡಕುದ್ರು ಸೇತುವೆ ಬಳಿ ಸ್ವಾಗತಿಸಿ ಮೆರವಣಿಗೆಯಲ್ಲಿ ಛಾಪೆಲ್‍ಗೆ ಕರೆತರಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಹೆನ್ರಿ ಡಿಸೋಜಾ, ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾಮ್ರೊ ರಜತ ಮಹೋತ್ಸವದ ದಿವ್ಯ ಬಲಿದಾನವನ್ನು ಅರ್ಪಿಸಿದರು. ಇವರೊಂದಿಗೆ ಗಂಗೊಳ್ಳಿ ಚರ್ಚ್ ಧರ್ಮಗುರುಗಳಾದ ವಂ| ಥಾಮಸ್ ರೋಶನ್ ಡಿಸೋಜ ಹಾಗೂ ಇತರ ಅತಿಥಿ ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು.
ಪವಿತ್ರ ಬಲಿದಾನದ ನಂತರ ವೇದಿಕೆ ಕಾರ್ಯಕ್ರಮದಲಿ ಜರುಗಿತು. ಗಂಗೊಳ್ಳಿ ಚರ್ಚ್ ಮಕ್ಕಳಿಂದ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಹೆನ್ರಿ ಡಿಸೋಜಾ ಮತ್ತು ಫಾದರ್ ಆಲ್ಬರ್ಟ್ ಕ್ರಾಸ್ತಾ ಸಭೆಯನ್ನುದ್ದೇಶಿಸಿ ಸಂದೇಶ ನೀಡಿ ಸಂತ ಜೋಸೆಫ್ ವಾಜ್ ಪ್ರಾರ್ಥನಾ ಮಂದಿರದ ರಜತ ಮಹೋತ್ಸವಕ್ಕೆ ಶುಭ ಹಾರೈಸಿದರು.
ವಂ| ಧರ್ಮಗುರು ಥಾಮಸ್ ರೋಶನ್ ಡಿ’ಸೋಜಾ, ಗಂಗೊಳ್ಳಿ ಚರ್ಚಿನಲ್ಲಿ ಈ ಹಿಂದೆ ಸೇವೆ ನೀಡಿದ ವಂ|ಧರ್ಮಗುರು ಆಲ್ಬರ್ಟ್ ಕ್ರಾಸ್ತಾ, ವಂ|ಧರ್ಮಗುರು ಅಲ್ಫೋನ್ಸ್ ಡಿ’ಲಿಮಾ, ವಂ|ಧರ್ಮಗುರು ಅನಿಲ್ ಕರ್ನೆಲಿಯೊ ಇವರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅತಿ ವಂದನೀಯ ಡಾ.ಹೆನ್ರಿ ಡಿಸೋಜ, ದಾನಿಗಳು, ಪ್ರಾಯೋಜಕರನ್ನು ಸನ್ಮಾನಿಸಲಾಯಿತು. ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾವ್ರೊ ಮತ್ತು ಇತರ ಧರ್ಮಗುರುಗಳು ಮತ್ತು ಅತಿಥಿಗಳು ಹಾಜರಿದ್ದರು. ಗಂಗೊಳ್ಳಿ ಚರ್ಚಿನ 20 ಆಯೋಗಗಳ ಸಂಯೋಜಕಿ ಪ್ರೀತಿ ಫೆನಾರ್ಂಡಿಸ್ ಉಪಸ್ಥಿತರಿದ್ದರು.
ಗಂಗೊಳ್ಳಿ ಚರ್ಚಿನ ಧರ್ಮಗುರು ರೋಶನ್ ಡಿಸೋಜಾ ಸ್ವಾಗತಿಸಿ, ಪಾಲನ ಮಂಡಳಿಯ ಉಪಾಧ್ಯಕ್ಷ ವಿವಿಯನ್ ಕ್ರಾಸ್ತಾ, ವಂದಿಸಿದರು. ಓವಿನ್ ರೆಬೆಲ್ಲೊ ಮತ್ತು ಶ್ರೀಮತಿ ರೆನಿಟಾ ಬಾರೆನ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.