ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : “ಪುಸ್ತಕದ ಮನೆ” ಗ್ರಂಥಾಲಯ ಉದ್ಘಾಟನಾ ಸಮಾರಂಭ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಗ್ರಾಮೀಣ ಭಾಗದಲ್ಲಿ ಕಳೆದ 22 ವರ್ಷಗಳಿಂದ ತನ್ನದೇಯಾದ ಕಾರ್ಯಕ್ರಮ ಮೂಲಕ ಸಂಘಟನಾ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ನಂದಳಿಕೆ ಅಬ್ಬನಡ್ಖ ಫ್ರೆಂಡ್ಸ್ ಕ್ಲಬ್‍ನ ಮಿನಿ ಸಭಾಂಗಣದಲ್ಲಿ “ಪುಸ್ತಕದ ಮನೆ”ನೂತನ ಗ್ರಂಥಾಲಯ ಉದ್ಘಾಟನಾ ಸಮಾರಂಭ ಆದಿತ್ಯವಾರ ಜರಗಿತು.
ಕಾದಂಬರಿ, ಕಥಾಸಂಕಲನ, ಧಾರ್ಮಿಕ, ಯಕ್ಷಗಾನ, ಪುರಾಣ, ತುಳು ಸಾಹಿತ್ಯ ಹೀಗೆ ವೈವಿಧ್ಯಮಯ ಪುಸ್ತಕಗಳ ಸಂಗ್ರಹವಿರುವ ಸಾವಿರಾರು ಪುಸ್ತಕಗಳ ಸಂಗ್ರಹವಿದೆ. ಇಲ್ಲಿ ಪುಸ್ತಕ ಓದಬಹುದು. ಓದಿ, ವಾಪಸು ತಂದು ಕೊಡಬಹುದು. ಓದುಗರ ಬಳಗವನ್ನು ಸೇರಿಕೊಳ್ಳಬಹುದು. ಪುಸ್ತಕ - ಸಾಹಿತ್ಯದ ಬಗ್ಗೆ ಚರ್ಚೆ ನಡೆಸಬಹುದು. ಹೀಗೆ ಸಾಹಿತ್ಯಾಸ್ತಕರಿಗೆ, ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕ ಮನೆ ಉದ್ಘಾಟನೆಗೊಂಡಿದೆ.
ಗ್ರಂಥಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ವಹಿಸಿದ್ದರು.
ನಂದಳಿಕೆ ಕವಿ ಮುದ್ದಣ ಮಿತ್ರ ಮಂಡಳಿಯ ಸ್ಥಾಪಕ ಗೌರವಾಧ್ಯಕ್ಷರಾದ ನಂದಳಿಕೆ ಬಾಲಚಂದ್ರ ರಾವ್ ಅವರು “ಪುಸ್ತಕದ ಮನೆ” ನೂತನ ಗ್ರಂಥಾಲಯವನ್ನು ಉದ್ವಾಟಿಸಿ ಶುಭ ಹಾರೈಸಿದರು.
ಹಿರಿಯ ಪತ್ರಕರ್ತರಾದ ಡಾ.ಶೇಖರ್ ಅಜೆಕಾರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂವಾಧ್ಯಕ್ಷರಾದ ರಘುವೀರ್ ಶೆಟ್ಟಿ, ಆನಂದ ಪೂಜಾರಿ, ಸತೀಶ್ ಪೂಜಾರಿ, ಉದಯ ಅಂಚನ್, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ, ಸದಸ್ಯರಾದ ಆರತಿ ಕುಮಾರಿ, ಅಶ್ವಿನಿ ಪ್ರಶಾಂತ್, ಕಿರಣ್ ಶೆಟ್ಟಿ, ರಾಜೇಂದ್ರ ಶೆಟ್ಟಿಗಾರ್, ಪ್ರಶಾಂತ್ ಬೋಳ ಮೊದಲಾದವರಿದ್ದರು.