ಚಿಂತಾಮಣಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂದವರಿಂದ ರಂಜಾನ್ ಹಬ್ಬದ ಆಚರಣೆ 

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಶ್ರೀನಿವಾಸಪುರ- ಚಿಂತಾಮಣಿ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಮಂಗಳವಾರ ಮುಸ್ಲಿಂ ಬಾಂದವರಿಂದ ರಂಜಾನ್ ಹಬ್ಬದ ಪ್ರಯುಕ್ತ ಆಚರಣೆ ನಡೆಯಿತು.
ಪುರಸಭೆಯ ಉಪಾಧ್ಯಕ್ಷೆ ಆಯಿಷಾನಯಾಶ್ ಪತ್ರಿಕೆಯೊಂದಿಗೆ ಮಾತನಾಡಿ ಮುಸ್ಲಿಮರ ಈ ಅತ್ಯಂತ ಪವಿತ್ರ ಹಾಗೂ ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ರಂಜಾನ್ ಹಬ್ಬವು ಹೊಂದಿದೆ ಎಂದರು.
ಪವಿತ್ರ ರಂಜಾನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ.ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ . ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟ ಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ . ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ ಎಂದರು.
ಹಿಂದು-ಮುಸ್ಲಿಂ ಬಾಂದವರು ಜೊತೆಗೂಡಿ ಹಬ್ಬದ ಶುಬಾಶಗಳನ್ನು ಹೇಳುತ್ತಾ, ಸೌಹಾರ್ದತೆ ಹಾಗೂ ಸಹಕಾರಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಹಬ್ಬವನ್ನು ಆಚರಣೆ ಮಾಡಿದರು.
ಪಟ್ಟಣದಲ್ಲಿ ಕೆಲ ಯುವಕರು ದ್ವಿಚಕ್ರ ವೀಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ವೀಲಿಂಗ್ ಮಾಡುವ ಸಮಯದಲ್ಲಿ ಏನೇ ಅನಾಹುತವಾದರೂ ನಿಮ್ಮಿಂದ ನಿಮ್ಮ ಕುಟಂಬವು ಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಆದ್ದರಿಂದ ದಯವಿಟ್ಟು ಯುವಕರು ವೀಲಿಂಗ್‍ನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಸಮುದಾಯದ ಮುಖಂಡರು ಇದ್ದರು.
ತಾಲೂಕಿನ ಮುಸ್ಲಿಂ ಬಾಂದವರು ಆಯಾ ಆಯಾ ಗ್ರಾಮಗಳಲ್ಲಿ ಸಂಭ್ರಮ ಸಡಗರದೊಂದಿಗೆ ಹಬ್ಬವನ್ನು ಆಚರಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗುಂಡಿದ್ದರು.