ಭಾ.ರೆಡ್ ಕ್ರಾಸ್ ಸಂಸ್ಥೆ ಮತ್ತು ವೈದ್ಯಕೀಯ ಪ್ರಕೋಷ್ಠ ಇವರ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆಯೆಂದು ಚಾಲಕರಿಗಾಗಿ ಉಚಿತ ಆರೋಗ್ಯ ಶಿಬಿರ

JANANUDI.COM NETWORK


ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಇವರ ಸಹಯೋಗದಲ್ಲಿ ಮೇ1ರಂದು ಕಾರ್ಮಿಕ ದಿನಾಚರಣೆ ಹಾಗೂ ಉಚಿತ ಆರೋಗ್ಯ ಶಿಬಿರ ಮತ್ತು ದಂತ್ಯ ಆರೋಗ್ಯ ಮಾಹಿತಿ ಕಾರ್ಯಾಗಾರ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಅಶ್ವಿನಿ ಕ್ಲಿನಿಕ್ ಎದುರು ತಲ್ಲೂರಿನಲ್ಲಿ ನೆರವೇರಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಜಯಕರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾದಿದರು. ಶ್ರೀಯುತ ಕರಣ್  ಪೂಜಾರಿ ತಾಲೂಕು ಸದಸ್ಯರು, ಮಾತನಾಡಿ ರಿಕ್ಷಾ ಚಾಲಕರು ಜನ ಜೀವ ಉಳಿಸುವ ಕೆಲಸ ಮಾಡುತ್ತಾರೆ ಅವರು ಆರೋಗ್ಯವಂತರಾಗಿರಬೇಕು ಇಂಥಹ ಒಂದು ಒಳ್ಳೆಯ ಕಾರ್ಯಕ್ರಮ ಹಂಚಿ ಕೊಂಡಿದ್ದಿರಿ’ ಎಂದು ಶುಭ ಕೋರಿದರು. ದಂತ ಆರೋಗ್ಯದ ಬಗ್ಗೆ, ಡಾ|ಜಗದೀಶ್ ಜೋಗಿ ಸಹಸಂಚಾಲಕರು ವೈದ್ಯಕೀಯ ಪ್ರಕೊಷ್ಠ ಕುಂದಾಪುರ ತಾಲೂಕು ಇವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂತೋμï ಬೈಂದೂರು ರೈತ ಮೋರ್ಚಾ ಕಾರ್ಯದರ್ಶಿ, ಆಟೋರಿಕ್ಷಾ ಚಾಲಕರ ಅಧ್ಯಕ್ಷರು ತಲ್ಲೂರು ಶ್ರೀ ಶೇಕು ಪೂಜಾರಿ. ಶ್ರೀ ಸೀತಾರಾಮ್ ಶೆಟ್ಟಿ ಕಾರ್ಯದರ್ಶಿ ರೆಡ್ ಕ್ರಾಸ್ ಸಂಸ್ಥೆ, ಶಿವರಾಮ ಶೆಟ್ಟಿ ಖಜಾಂಚಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಶ್ರೀ ಮುತ್ತಯ್ಯ ಶೆಟ್ಟಿ ಸದಸ್ಯರು ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಾಕ್ಟರ್ ರಾಜೇಶ್ ಶೆಟ್ಟಿ ಕೋಟೇಶ್ವರ ಉಪಸ್ಥಿತರಿದ್ದರು. ಡಾ| ರವೀಂದ್ರ ಸಂಚಾಲಕರು ವೈದ್ಯಕೀಯ ಪ್ರಕೊಷ್ಠ ಕುಂದಾಪುರ ತಾಲೂಕು ಧನ್ಯವಾದಗಳನ್ನು ಅರ್ಪಿಸಿದರು. ಡಾ| ಸೋನಿ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು
.