ಅಂರ್ತಜಲ ವೃದ್ಧಿಗಾಗಿ ಹನಿಹನಿ ನೀರನ್ನು ಸಂಗ್ರಹಿಸಿ ಜಲಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ : ಕೆ.ಆರ್.ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಅಂರ್ತಜಲ ವೃದ್ಧಿಗಾಗಿ ಹನಿಹನಿ ನೀರನ್ನು ಸಂಗ್ರಹಿಸಿ ಜಲಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ಮೂಲಗೊಲ್ಲಪಲ್ಲಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಆಂದ್ರಕ್ಕೆ ಹರಿದು ಪೋಲಾಗಿ ಹೋಗುತ್ತಿರುವ ಮಳೆಯ ನೀರನ್ನು ತಡೆಗಟ್ಟಲು ಕೆರೆಯನ್ನು ನಿರ್ಮಿಸುವ ಸಲುವಾಗಿ ಸುಮಾರು 1.57ಕೋಟಿ ವೆಚ್ಚದ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಬೆಟ್ಟಗುಡ್ಡಗಳ ಮೇಲೆ ಬೀಳುವ ಮಳೆ ನೀರು ಆಂದ್ರಕ್ಕೆ ಹರಿಯುತ್ತಿರುವ ಬಗ್ಗೆ ಗ್ರಾಮದ ಯುವಕರ ತಂಡವೊಂದು ಹಾಗೂ ಗ್ರಾಮಸ್ಥರು ಈ ಹಿಂದೆ ನನ್ನ ಗಮನಕ್ಕೆ ತಂದಿದ್ದರು. ಮೂಲಗೊಲ್ಲಪಲ್ಲಿ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ರೈತರೊಂದಿಗೆ ಚರ್ಚಿಸಿ ಯಾವ ಬೆಟ್ಟಗುಡ್ಡಗಳಿಂದ ನೆರೆಯ ಆಂದ್ರದ ಕೆರೆಗಳಿಗೆ ಹರಿಯಲಾಗುತ್ತದೆ ಎಂಬುದರ ಮಾಹಿತಿ ಪಡೆಯಲಾಗಿತ್ತು .
ಅದರಂತೆ ರಾಜ್ಯದ ಗಡಿಭಾಗವಾದ ರಾಯಲ್ಪಾಡು ಹಾಗು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಬೀಳುವ ಮಳೆಯ ನೀರನ್ನು ನೆರೆಯ ಆಂದ್ರಪ್ರದೇಶದ ಕೆರೆಗಳನ್ನು ಹರಿಯುವುದನ್ನು ತಡಗಟ್ಟಬೇಕೆಂಬ ಸಂಕಲ್ಪದಿಂದಾಗಿ, ಇದನ್ನ ತಪ್ಪಿಸುವ ಸಲುವಾಗಿ 1.57ಕೋಟಿ ವೆಚ್ಚದ ವೆಚ್ಚದಲ್ಲಿ ಕೆರಯೊಂದನ್ನ ನಿರ್ಮಿಸಲು ಯೋಜನೆಯೊಂದನ್ನು ರೂಪಿಸುವಂತೆ ಸೂಚಿಸಲಾಗಿತ್ತು . ಅದರೆ ಹಿನ್ನೆಲೆಯಲ್ಲಿ ಈ ದಿನ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಈ ಭಾಗದಲ್ಲಿ ಬೆಟ್ಟಗುಡ್ಡಗಳಿಂದ ಹರಿದು ಪೋಲಾಗುತ್ತಿರುವ ಮಳೆಯ ನೀರಿಗೆ ಕೆರೆಯನ್ನು ನಿರ್ಮಾಣ ಮಾಡುವುದರಿಂದ ಅಂರ್ತಜಲ ಅಭಿವೃದ್ಧಿಯಾಗಿ ಕಾಡುಪ್ರಾಣಿ ಪಕ್ಷಿಗಳಿಗೆ ದಾಹತಣಿಸಲು ಒಂದಿಷ್ಟು ನೀರು ಸಿಗುವುದಲ್ಲದೆ, ಮರಗಿಡಗಳು ಸಂದರವಾಗಿ ಬೆಳೆಯಲು ಕಾರಣವಾಗುತ್ತದೆ ಎಂದರು.
ಅಭಿಯಂತರ ಆನಂದ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ರೆಡ್ಡಿ, ಮುಂಖಡರಾದ ರಾಮಾನುಜಾಚಾರ್, ರಾಮಕೃಷ್ಣಪ್ಪ,ಸುರೇಶ್,ವೈ.ಆರ್.ಶ್ರೀನಾಥ್,ಮದರಂಕಪಲ್ಲಿ ಪ್ರಶಾಂತ್,ತಾ.ಪಂ ಮಾಜಿ ಅಧ್ಯಕ್ಷ ನರೇಶ್,ಗ್ರಾ,ಪಂ.ಸದಸ್ಯರಾದ ಆರ್.ಗಂಗಾದರ್,ಕನ್ನಯ್ಯ,ಗ್ರಾ.ಪಂ.ಮಾಜಿ ಸದಸ್ಯ ಸುಣ್ಣಕಲ್‍ಮಂಜುನಾಥ್,