ಕುಂದಾಪುರದಲ್ಲಿ ಪಾಸ್ಖ ಹಬ್ಬ – ಯೇಸು ಪುನರುತ್ಥಾನ ಹೊಂದಿದ್ದು, ನಾವೂ ಪರಿವರ್ತನೆ ಹೊಂದಿ ಪುನರುತ್ಥಾನ ಪಡೆಯಲಿಕ್ಕಾಗಿ : ಫಾ|ದೀಪ್

JANANUDI.COM NETWORK


ಕುಂದಾಪುರ,ಎ.17: ಇತಿಹಾಸ ಪ್ರಸಿದ್ದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಾನುವಾರ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿಧಿ ಆಚರಿಸಲಾಯಿತು.
ಕಟ್ಕೆರೆ ಬಾಲಯೇಸು ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಟ್ಟು “ಅದಾಮ್ ಮತ್ತು ಏವ್ ಇವರಿಗೆ ದೇವರು ತಮ್ಮಂತ್ತೆ ಜನ್ಮ ನೀಡಿ ಈ ಭೂಮಿಯ ಮೇಲೆ ಪ್ರಾಣಿ ಪಕ್ಷಿಗಳ ಮೇಲೆ ಅಧಿಕಾರ ನೀಡಿದರು, ಆದರೆ ಒಂದು ಮರದ ಹಣ್ಣುಗಳನ್ನು ತಿನ್ನಬೇಡಿ ಎಂದು ಶರತ್ತು ವಿದಿಸಿದ್ದರು, ಸೈತಾನನ ಪ್ರಲೋಭನೆಗೆ ಒಳಗಾಗಿ, ಆ ಹಣುಗಳನ್ನು ಅದಾಮ್ ಏವ್ ತಿಂದು ಪಾಪ ಕಟ್ಟಿಕೊಂಡರು, ಅಂದೇ ಅದಾಮ್ ಮತ್ತು ಏವ್ ಇವರಲ್ಲಿ ಇದ್ದ ದೈವತ್ವ ಸತ್ತು ಹೋಯಿತು, ಕೇವಲ ಮನುಷ್ಯರಾಗಿ ಉಳಿದರು, ಹೀಗಾಗಿ ಇಡೀ ಮನುಕುಲ ಪಾಪದಿಂದ ಕೂಡಿತು, ಈ ಪಾಪಾದಿಂದ ವಿಮೋಚನೆ ಮಾಡಲು, ದೇವರು ತಮ್ಮ ಪುತ್ರ ಯೇಸುವನ್ನು ಲೋಕಕ್ಕೆ ಕಳುಹಿಸಿದರು, ದೇವರ ಯೋಜನೆಯಂತೆ, ಯೇಸುವನ್ನು ವೈರಿಗಳ ಮೂಲಕ ಶಿಲುಭೆ ಮರಣ ಹೊಂದಿ ಆತನು ಹೇಳಿದಂತೆ ಪುನರ್ಜೀವಂತವಾಗುತ್ತಾನೆ, ಪುನರ್ಜೀವಂತಕ್ಕೆ ಸಾಕ್ಷಿ ಎಂಬಂತ್ತೆ, ಯೇಸು ತನ್ನ ಶಿಸ್ಯರಿಗೆ ಹಲವಾರು ಸಲ ಭೇಟಿಯಾಗುತ್ತಾನೆ,

ನಾವು ಸತ್ತ ಮೇಲೆ ನಮಗೂ ಯೇಸುವಿನಂತೆ ಪುನರ್ಜೀವಂತವಿದೆ ಇದೆ ಎಂದು ನಂಬಬೇಡಿ, ಯಾರು ಯೇಸುವಿನ ಬೋಧನೆಯಂತೆ ತಮ್ಮ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತಾರೋ ಅವರಿಗೆ ಮಾತ್ರ ಸತ್ತ ನಂತರ ಪುನರ್ಜೀವಂತ ಹೊಂದಿ ಸ್ವರ್ಗ ಪ್ರಾಪ್ತಿಯಾಗುತ್ತದೆ, ಅಂದರೆ ಯೇಸು ಪುನರುತ್ಥಾನ ಹೊಂದಿದ್ದು, ನಾವೂ ಪರಿವರ್ತನೆ ಹೊಂದಿ ಪುನರುತ್ಥಾನ ಪಡೆಯಲಿಕ್ಕಾಗಿ” ಎಂದು ಸಂದೇಶ ನೀಡಿದರು.


ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು.ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಫಾಸ್ಕ ಹಬ್ಬದ ಬಲಿದಾನದಲ್ಲಿ ಭಾಗಿಯಾದರು, ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭಾಗಿಯಾಗಿ ಶುಭಾಷಯಗಳನ್ನು ನೀಡಿ ವಂದಿಸಿದರು.